ಮಂಗಳೂರು: ಅಪಘಾತ, ದರೋಡೆ, ರಸ್ತೆ ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ಪೊಲೀಸ್ ಇಲಾಖೆ ಟ್ರಾಫಿಕ್ ಡ್ರೈವ್ ಹಮ್ಮಿಕೊಂಡಿದೆ.
ಸೆ.27ರಿಂದ ಅ.2ರವರೆಗೆ ಒಂದು ವಾರಗಳ ಕಾಲ ನಾವು ನಿರಂತರವಾಗಿ ಪ್ರತಿದಿನಕ್ಕೆ ಒಂದೊಂದು ಆದ್ಯತೆ ನೀಡಿ ಟ್ರಾಫಿಕ್ ಡ್ರೈವ್ ಮಾಡಲಾಗುತ್ತಿದೆ. ಸೋಮವಾರದಂದು ಟಿಂಟ್ ವಿರುದ್ದ ಕಾರ್ಯಾಚರಣೆ ನಡೆಯಲಿದ್ದು, ಸೆ.28ರಂದು ನಂಬರ್ ಪ್ಲೇಟ್‌ಗಳ ವಿರುದ್ದ ಕಾರ್ಯಾಚರಣೆ ನಡೆಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನು ಸೆ.29ರಂದು ಹೆಲ್ಮೆಟ್ ವಿರುದ್ದ ಕಾರ್ಯಾಚರಣೆ ನಡೆಸಲಿದ್ದು, ಸೆ.30ರಂದು ಇನ್ಶುರೆನ್ಸ್ ತಪಾಸಣೆ, ಅ.1ರಂದು ಹಳೆ ಕೇಸ್‌ಗಳ ಪರಿಶೀಲನೆ ಹಾಗೂ ಅ.2ರಂದು ಹೊಗೆ ತಪಾಸಣೆಯ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಂಗಳೂರು ನಗರವನ್ನು ಹೆಚ್ಚು ಸುರಕ್ಷಿತವಾಗಿರಿಸಲು, ಮಹಿಳೆಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೆ ಸುರಕ್ಷಿತೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.