Thursday, June 4, 2026
Homeಕರಾವಳಿಬೈಂದೂರು: ಕಾಲು ಜಾರಿ ಹೊಳೆಗೆ ಬಿದ್ದು ಬಾಲಕ ಸಾವು....!

ಬೈಂದೂರು: ಕಾಲು ಜಾರಿ ಹೊಳೆಗೆ ಬಿದ್ದು ಬಾಲಕ ಸಾವು….!

- Advertisement -
- Advertisement -

ಬೈಂದೂರು: ಹೊಳೆ ದಡದಲ್ಲಿ ಆಡುತ್ತಿದ್ದ ಬಾಲಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತ ಬಾಲಕನನ್ನು ಶಿರೂರು ಗ್ರಾಮದ ಅಳ್ವೆಗದ್ದೆ ಕೇಸರಕೋಡಿಯ ವೆಂಕಟೇಶ ಮೇಸ್ತ ಅವರ ಪುತ್ರ ಪನ್ನಗ(12) ಎಂದು ಗುರುತಿಸಲಾಗಿದೆ.

ಈತ ನೆರೆಮನೆಯ ರಾಜೇಶನೊಂದಿಗೆ ಶಿರೂರು ಗ್ರಾಮದ ಕಿರುಹೊಳೆ ಕುಸಿನಗದ್ದೆ ಹೊಳೆಯ ದಡದಲ್ಲಿ ಆಟವಾಡುತಿದ್ದರು. ಈ ವೇಳೆ ಕಾಲು ಜಾರಿ ಹೊಳೆಗೆ ಬಿದ್ದ ಪನ್ನಗ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!