Friday, January 27, 2023
Homeಕರಾವಳಿಬೆಳ್ತಂಗಡಿ :  ಬಂಗಾರ್ ಪಲ್ಕೆಯಲ್ಲಿ ಟಾಕ್ಟರ್ ಪಲ್ಟಿ ; ಓರ್ವ ಕಾರ್ಮಿಕ ಸಾವು , ಇಬ್ಬರು...

ಬೆಳ್ತಂಗಡಿ :  ಬಂಗಾರ್ ಪಲ್ಕೆಯಲ್ಲಿ ಟಾಕ್ಟರ್ ಪಲ್ಟಿ ; ಓರ್ವ ಕಾರ್ಮಿಕ ಸಾವು , ಇಬ್ಬರು ಗಂಭೀರ

- Advertisement -
- Advertisement -

ಬೆಳ್ತಂಗಡಿ : ಕಿಂಡಿ ಅಣೆಕಟ್ಟು ಕಾಮಗಾರಿಗೆ ಕಬ್ಬಿಣವನ್ನು ಸಾಗಿಸುತ್ತಿದ್ದ ಟಾಕ್ಟರ್ ಪಲ್ಟಿಯಾಗಿ ತೋಟಕ್ಕೆ ಬಿದ್ದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು , ಇಬ್ಬರು ಗಂಭೀರ ಗಾಯಗೊಂಡ ಘಟನೆ ಬಂಗಾರ್ ಪಲ್ಕೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆಯಲ್ಲಿ ಕಿಂಡಿ ಅಣೆಕಟ್ಟಿನ ಕಾಮಗಾರಿ ನಡೆಯುತ್ತಿದ್ದ ಇದಕ್ಕೆ ಟಾಕ್ಟರ್ ನಲ್ಲಿ ಸಂಸೆಯಿಂದ ಡಿ.7 ರಂದು ಕಬ್ಬಿಣದ ಸರಕು ಸಾಗುತ್ತಿದ್ದಾಗ ಬಂಗಾರ್ ಪಲ್ಕೆಯ ಬಳಿಯ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪಕ್ಕದ ಹೊಂಡಕ್ಕೆ ಬಿದ್ದಿದೆ. ಈ ವೇಳೆ ಟಾಕ್ಟರ್ ನಲ್ಲಿದ್ದ ಓರ್ವ ಚಿಕ್ಕಮಗಳೂರು ಜಿಲ್ಲೆಯ ಸಂಸೆಯ ಅಶೋಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು , ಇಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ದೌಡಾಯಿಸಿದ್ದು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!