Thursday, April 25, 2024
Homeಕರಾವಳಿಬೆಳ್ತಂಗಡಿ: ಮೋಹನ್ ಶೆಟ್ಟಿಗಾರ್ ಉಜಿರೆ ಮತ್ತು ಕೇಶವ ಪಿ. ಗೌಡ ಕೆಪಿಸಿಸಿ ಸದಸ್ಯರಾಗಿ ಆಯ್ಕೆ

ಬೆಳ್ತಂಗಡಿ: ಮೋಹನ್ ಶೆಟ್ಟಿಗಾರ್ ಉಜಿರೆ ಮತ್ತು ಕೇಶವ ಪಿ. ಗೌಡ ಕೆಪಿಸಿಸಿ ಸದಸ್ಯರಾಗಿ ಆಯ್ಕೆ

spot_img
- Advertisement -
- Advertisement -

ಬೆಳ್ತಂಗಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ(ಕೆಪಿಸಿಸಿ) ಇದರ ಸದಸ್ಯರಾಗಿ‌ ಉಜಿರೆಯ ಉದ್ಯಮಿ ಹಾಗೂ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಮೋಹನ್ ಶೆಟ್ಟಿಗಾರ್ ಮತ್ತು ನ್ಯಾಯವಾದಿ ಹಾಗೂ ಹಿರಿಯ ಕಾರ್ಯಕರ್ತ ಕೇಶವ ಪಿ ಗೌಡ ಇವರು ನೇಮಕಗೊಂಡಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬೆಳ್ತಂಗಡಿಯ ಮಾಜಿ ಶಾಸಕರಾದ ಗಂಗಾಧರ ಗೌಡ ಮತ್ತು ವಸಂತ ಬಂಗೇರ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಈ ನೇಮಕಗೊಳಿಸಿದ್ದಾಗಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಜಿ ಗೌಡ ತಿಳಿಸಿದ್ದಾರೆ.

ಮೋಹನ್ ಶೆಟ್ಟಿಗಾರ್ ಉಜಿರೆ ಅವರು 45 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಹಲವು ಜವಾಬ್ದಾರಿ ನಿರ್ವಹಿಸಿದ್ದಾರೆ. ದೀರ್ಘ ವರ್ಷಗಳ ಕಾಲ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, 1978 ರಲ್ಲಿ ಇಂದಿರಾಗಾಂಧಿ ಅವರ ಚುನಾವಣೆ ಪ್ರಚಾರಕರಾಗಿ, ರೋಟರಿ ಕ್ಲಬ್ ಸದಸ್ಯರಾಗಿ, ಉಜಿರೆ ಗ್ರಾ.ಪಂ ಸದಸ್ಯರಾಗಿ, ಉಜಿರೆ ಸಹಕಾರಿ‌ ಸಂಘದಲ್ಲಿ 3 ಅವಧಿಯಲ್ಲಿ ನಿರ್ದೇಶಕರಾಗಿ, ಜನಜಾಗೃತಿ ವೇದಿಕೆಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಬೆಳ್ತಂಗಡಿ ಪ್ರಿಯದರ್ಶಿನಿ ಸಹಕಾರಿ ಸಂಘದ ನಿರ್ದೇಶಕರಾಗಿ, ಸಿದ್ದಕಟ್ಟೆ ವೀರಭದ್ರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೇಶವ ಪಿ‌‌ ಗೌಡ ಅವರು 3 ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರಯಕರ್ತರಾಗಿ ವಿವಿಧ ಜವಾಬ್ದಾರಿಗಳನ್ನು ಪೂರೈಸಿದ್ದಾರೆ‌. ಅತ್ಯುತ್ತಮ ವಾಗ್ಮಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ತರಬೇತುದಾರರಾಗಿರುವ  ಅವರು ವೃತ್ತಿಯಲ್ಲಿ ನ್ಯಾಯವಾದಿಗಳು.

ಪಕ್ಷದಲ್ಲಿ ತಾಲೂಕು‌‌ ಕಿಸಾನ್ ಘಟಕದ ಅಧ್ಯಕ್ಷರಾಗಿ ಸೇವೆ ನೀಡಿದ್ದಾರೆ. ಉಳಿದಂತೆ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಬೆಳಾಲು ಮೈತ್ರಿ ಯುವಕ ಮಂಡಲದ ಅಧ್ಯಕ್ಷರಾಗಿ, ಯುವ ಪ್ರಶಸ್ತಿ ಪಡೆದುಕೊಂಡವರಾಗಿದ್ದಾರೆ. ಧರ್ಮಸ್ಥಳ ಗ್ರಾ.ಪಂ ನಲ್ಲಿ 2 ಬಾರಿ ಸದಸ್ಯರಾಗಿ, ಒಂದು ಅವಧಿಯಲ್ಲಿ ಅಧ್ಯಕ್ಷರಾಗಿ, ಧರ್ಮಸ್ಥಳ ಸಹಕಾರಿ ಸಂಘದ ನಿರ್ದೇಶಕರಾಗಿ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾಗಿ, ಬೆಳ್ತಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಜೇಸಿ ಐ ಬೆಳ್ತಂಗಡಿ ಮಂಜುಶ್ರೀ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಶ್ರೀ ಕಾಲಭೈವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಜಿಲ್ಲಾ ಕಾಂಗ್ರೆಸ್ ಸದಸ್ಯರಾಗಿ ಸೇವೆಯಲ್ಲಿದ್ದಾರೆ

- Advertisement -
spot_img

Latest News

error: Content is protected !!