Wednesday, June 3, 2026
Homeತಾಜಾ ಸುದ್ದಿರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಆರಂಭ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಆರಂಭ

- Advertisement -
- Advertisement -

ಬೆಂಗಳೂರು; ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಇಂದಿನಿಂದ ಆರಂಭವಾಗಿದೆ.ಈ ಬಗ್ಗೆ ನಟ ಯಶ್ ಮಾಹಿತಿ ನೀಡಿದ್ದಾರೆ.

ನೆಲಮಂಗಲ ರಸ್ತೆಯಲ್ಲಿರುವ ಎಚ್​ಎಂಟಿ ಕಾರ್ಖಾನೆ ಬಳಿ ಹಾಕಲಾಗಿರುವ ಬೃಹತ್ ಸೆಟ್​ನಲ್ಲಿ ಸಿನಿಮಾದ ಮುಹೂರ್ತ ನಡೆಯಿತು. ಸ್ವತಃ ಯಶ್, ನಿರ್ಮಾಪಕರು ಹಾಗೂ ಇನ್ನೂ ಕೆಲವರು ದೇವರಿಗೆ ಪೂಜೆ ಮಾಡುವ ಮೂಲಕ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿಸಿದ್ದಾರೆ.ಚಿತ್ರರಂಗದ ಯಾವುದೇ ಸೆಲೆಬ್ರಿಟಿಗಳನ್ನು ಮುಹೂರ್ತಕ್ಕೆ ಆಹ್ವಾನಿಸಲಾಗಿಲ್ಲ. ಬದಲಿಗೆ ಸರಳವಾಗಿ ಸಿನಿಮಾದ ಲೈಟ್​ ಬಾಯ್​ಯಿಂದ ಸಿನಿಮಾಕ್ಕೆ ಕ್ಲಾಪ್ ಮಾಡಿಸಲಾಗಿದೆ.

ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕಿ ಗೀತು ಮೋಹನ್​ದಾಸ್ ಸಹ ಭಾಗಿಯಾಗಿದ್ದರು. ಗೀತು ಮೋಹನ್​ದಾಸ್ ಪತಿ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಪಕ ವೆಂಕಟ್ ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್​ನಿಂದ ಈ ಸಿನಿಮಾ ನಿರ್ಮಾಣಗೊಳ್ಳಲಿದೆ. ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್​ನ ಕಿಯಾರಾ ಅಡ್ವಾಣಿ, ಸ್ಟಾರ್ ನಟಿ ನಯನತಾರಾ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.2026ರ ಆರಂಭದಲ್ಲಿ ಮೂವಿ ತೆರೆಗೆ  ಬರಲಿದೆ.

- Advertisement -

Latest News

error: Content is protected !!