Wednesday, June 3, 2026
Homeಕರಾವಳಿಉಡುಪಿಉಡುಪಿ: ಈಜಾಡುತ್ತಿದ್ದ ಪ್ರವಾಸಿಗ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರಪಾಲು; ಸ್ಥಳೀಯರಿಂದ ರಕ್ಷಣೆ

ಉಡುಪಿ: ಈಜಾಡುತ್ತಿದ್ದ ಪ್ರವಾಸಿಗ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರಪಾಲು; ಸ್ಥಳೀಯರಿಂದ ರಕ್ಷಣೆ

- Advertisement -
- Advertisement -

ಉಡುಪಿ: ಕಡಲಿನ ಅಲೆಗಳ ಅಬ್ಬರಕ್ಕೆ ಸಿಲುಕಿ ಪ್ರವಾಸಿಗನೊಬ್ಬ ಕೊಚ್ಚಿ ಹೋಗಿ ಬಳಿಕ ರಕ್ಷಿಸಲ್ಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.

ಹೂಡೆ ಬಳಿಯ ಕಡಲ ತೀರದಲ್ಲಿ ಪ್ರವಾಸಿಗ ಈಜಾಟ ಆಡುತ್ತಿದ್ದ ವೇಳೆ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.

ಸಮುದ್ರದಲ್ಲಿ ಮುಳುಗಿ ಏಳುತ್ತಿದ್ದ ಪ್ರವಾಸಿಗನನ್ನು ಸ್ಥಳೀಯರಾದ ಹರ್ಷ ಕುಂದರ್ ಮತ್ತು ಗಣೇಶ್ ಕುಂದರ್ ನೇತೃತ್ವದಲ್ಲಿ ಯುವಕರು ರಕ್ಷಣೆ ಮಾಡಿದ್ದಾರೆ.

ಸಮುದ್ರಕ್ಕೆ ಇಳಿದು ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದು, ಯುವಕ ಅಪಾಯದಿಂದ ಪಾರಾಗಿದ್ದಾನೆ.

- Advertisement -

Latest News

error: Content is protected !!