Monday, July 1, 2024
HomeUncategorizedಅಜ್ಮೀರ್ ಯಾತ್ರೆಗೆ ಕರೆದುಕೊಂಡು ಹೋಗಿ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್ ಸಂಸ್ಥೆಯಿಂದ ವಂಚನೆ ಆರೋಪ; ಉಪ್ಪಿನಂಗಡಿ...

ಅಜ್ಮೀರ್ ಯಾತ್ರೆಗೆ ಕರೆದುಕೊಂಡು ಹೋಗಿ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್ ಸಂಸ್ಥೆಯಿಂದ ವಂಚನೆ ಆರೋಪ; ಉಪ್ಪಿನಂಗಡಿ ಮೂಲದ ಟೂರ್ ಸಂಸ್ಥೆಯ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು

spot_img
- Advertisement -
- Advertisement -

ಉಪ್ಪಿನಂಗಡಿ ಮೂಲದ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್ ಸಂಸ್ಥೆಯ ವಿರುದ್ಧ ಇದೀಗ ಭಾರೀ ವಂಚನೆಯ ಆರೋಪ ಕೇಳಿ ಬಂದಿದೆ. ಟೂರ್ ಸಂಸ್ಥೆ ಅಜ್ಮೀರ್ ಯಾತ್ರೆಗೆ ಕರೆದುಕೊಂಡು ಹೋಗಿ ಹಣ ವಂಚಿಸಿದೆ ಎಂದು ಯಾತ್ರಾರ್ಥಿ ಆತೂರು ಮೂಲದ ಕುಟುಂಬವೊಂದು ಬೆಂಗಳೂರಿನ ಪದ್ಮನಾಭನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.

ಪುತ್ತೂರಿನ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿಯ ಫಾರೂಕ್ ಎಂಬವರಿಗೆ ಸೇರಿದ ಈ ಟೂರ್ ಏಜೆನ್ಸಿ ಮೂಲಕ ಆತೂರು ಮೂಲದ ಮಹಮ್ಮದ್ ತ್ವಾಹ ಮತ್ತು ಕುಟುಂಬಸ್ಥರು ಸೇರಿ ಒಟ್ಟು 60 ಯಾತ್ರಿಕರಿದ್ದ ತಂಡ ಅಜ್ಮೀರ್ ಯಾತ್ರೆಗೆ ತೆರಳಿತ್ತು. ಫಾರೂಕ್ ಅವರ ಟೂರ್ ಏಜೆನ್ಸಿ ಮೂಲಕ ಬೆಂಗಳೂರಿನಿಂದ ಅಜ್ಮೀರ್ ಗೆ ತಂಡ ತೆರಳಿತ್ತು. 60 ಸಾವಿರದ ಪ್ಯಾಕೇಜ್ ಮೂಲಕ ಅಜ್ಮೀರ್ ಯಾತ್ರೆಗೆ ತೆರಳತ್ತು. ಆದರೆ ಅಜ್ಮೀರ್ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಮಹಮ್ಮದ್ ತ್ವಾಹ ಫ್ಯಾಮಿಲಿ ಅವರಲ್ಲಿ ಟೂರ್ ಏಜೆನ್ಸಿ ಸಿಬ್ಬಂದಿ ಹೆಚ್ಚುವರಿ ಹಣ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ ನಾವು ಕೊಡಲ್ಲ. ಯಾಕೆ ಹೆಚ್ಚುವರಿಯಾಗಿ ಹಣ ಕೊಡಬೇಕು ಎಂದು ಪ್ರಶ್ನಿಸಿದಾಗ ಯಾತ್ರಿಕರಿಗೆ ಟೂರ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ರೀತಿ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಏಜೆನ್ಸಿಯವರು ಪ್ರತೀ ಪ್ಯಾಕೇಜ್ ಟೂರುಗಳಲ್ಲೂ ಯಾತ್ರಿಕರಿಗೆ ಇದೇ ರೀತಿ ಹಣ ವಂಚಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನು ಪ್ರಶ್ನಿಸಿದವರ ಮೇಲೆ ಟೂರ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡುತ್ತಾರೆ ಎಂದು ಆರೋಪಿಸಲಾಗಿದೆ.ಸದ್ಯ ಮಹಮ್ಮದ್ ತ್ವಾಹ ಕುಟುಂಬಸ್ಥರು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದೆ.ಮಹಮ್ಮದ್ ತ್ವಾಹ ಅವರ ಫ್ಯಾಮಿಲಿಯ ಅಬ್ದುಲ್ ರಝಾಕ್ ಮೇಲೆ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ.ಬಸ್ಸಿನಲ್ಲೇ ರಝಾಕ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದ್ದು, ಹಲ್ಲೆಗೊಳಗಾದ ಅಬ್ದುಲ್ ರಝಾಕ್ ಅವರು ಬೆಂಗಳೂರಿನ ಪದ್ಮನಾಭನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!