Thursday, June 4, 2026
HomeUncategorizedಬಂಟ್ವಾಳ: ಮಳೆಗೆ ಕುಸಿದ ಕಾಂಪೌಂಡ್; ಅಪಾಯದಲ್ಲಿ ಎರಡು ಮನೆಗಳು

ಬಂಟ್ವಾಳ: ಮಳೆಗೆ ಕುಸಿದ ಕಾಂಪೌಂಡ್; ಅಪಾಯದಲ್ಲಿ ಎರಡು ಮನೆಗಳು

- Advertisement -
- Advertisement -

ಬಂಟ್ವಾಳ: ಸತತವಾಗಿ ಸುರಿದ ಮಳೆಯಿಂದಾಗಿ ಕಾಂಪೌಂಡ್ ಕುಸಿದು ಎರಡು ಮನೆಗಳಿಗೆ ಅಪಾಯ ಎದುರಾಗಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ಸಂಭವಿಸಿದೆ.

ಕಸಬಾ ಗ್ರಾಮದ ಹೊಸ್ಮಾರು ಎಂಬಲ್ಲಿ ಕಾಂಪೌಂಡ್ ಕುಸಿದ ಪರಿಣಾಮ ಅಶೋಕ್ ಪೂಜಾರಿ ಮತ್ತು ಗಣೇಶ್ ಪೂಜಾರಿ ಎಂಬವವರ ಮನೆ ಅಪಾಯದಲ್ಲಿ ಸಿಲುಕಿದೆ.

ಎರಡೂ ಮನೆಗಳ ಸದಸ್ಯರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸಂಬಂಧಿಕರ ಮನೆಗಳಿಗೆ ಸ್ಥಳಾಂತರ ಮಾಡಲಾಗಿದೆ.ಘಟನಾ‌ ಸ್ಥಳದಲ್ಲಿ ಈಗಾಗಲೇ ಕುಸಿದಿರುವ ಮಣ್ಣು ಮತ್ತೆ ಕುಸಿಯದಂತೆ ತುರ್ತು ತಡೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ.

ರಾತ್ರಿಯಿಡೀ ಮಳೆ ಸುರಿದಿರುವ ಪರಿಣಾಮ ನೇತ್ರಾವತಿ ನದಿಯಲ್ಲಿ ಕೂಡಾ ನೀರಿನ ಮಟ್ಟ ಏರಿಕೆಯಾಗಿದೆ.

- Advertisement -

Latest News

error: Content is protected !!