Thursday, June 4, 2026
Homeತಾಜಾ ಸುದ್ದಿನಾಳೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ`OPD' ಸೇವೆ ಬಂದ್

ನಾಳೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ`OPD’ ಸೇವೆ ಬಂದ್

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳ ಮಧ್ಯೆ ನಾಳೆ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಹಾಗಾಗಿ ನಾಳೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆ ಬಂದ್ ಆಗಲಿದೆ.

ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮ ಅಧಿಸೂಚನೆ ವಿರೋಧಿಸಿ ಪ್ರತಿಭಟನೆ ನಡೆಸಲು ಖಾಸಗಿ ಅಸ್ಪತ್ರೆಗಳು ನಿರ್ಧರಿಸಿದ್ದು, ನಾಳೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಓಪಿಡಿ ಸೇವೆ ಸಿಗುವುದಿಲ್ಲ. ಅಧಿಸೂಚನೆ ಹಿಂಪಡೆಯಲು ಖಾಸಗಿ ಆಸ್ಪತ್ರೆಗಳು ಆಗ್ರಹಿಸಿ, ನಾಳೆ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿವೆ. ಹೀಗಾಗಿ ಬೆಂಗಳೂರಿನಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಓಪಿಡಿ ಸೇವೆ ಬಂದ್ ಆಗಲಿದೆ.

- Advertisement -

Latest News

error: Content is protected !!