Sunday, May 5, 2024
Homeತಾಜಾ ಸುದ್ದಿ12ರ ಪೋರನನ್ನು ಎಳೆದೊಯ್ದ ಗಾಳಿಪಟ!..- ಸಾಮಾಜಿಕ ಜಾಲತಾಣದಲ್ಲಿ ದೃಶ್ಯಗಳು ವೈರಲ್​

12ರ ಪೋರನನ್ನು ಎಳೆದೊಯ್ದ ಗಾಳಿಪಟ!..- ಸಾಮಾಜಿಕ ಜಾಲತಾಣದಲ್ಲಿ ದೃಶ್ಯಗಳು ವೈರಲ್​

spot_img
- Advertisement -
- Advertisement -

ಜಕಾರ್ತ:ಇಲ್ಲಿನ ಇಂಡೋನೇಷಿಯಾದ ಪ್ರಿಂಗ್ಸೆವ್ಯೂ ರೆಜೆನ್ಸಿಯಲ್ಲಿ 12 ವರ್ಷದ ಬಾಲಕನನ್ನು ಗಾಳಿಪಟ ಎಳೆದೊಯ್ದ ಘಟನೆ ವರದಿಯಾಗಿದೆ. ಬಾಲಕ 30 ಅಡಿ ಎತ್ತರದಿಂದ ಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೇಲಿಂದ ಬಿದ್ದ ಬಾಲಕನ ಕೈ ಮೂಳೆ ಮುರಿದಿದೆ ಎಂದು ವರದಿಯಾಗಿದೆ.

ಬಾಲಕ ತನಗಿಂತ ಸುಮಾರು ಮೂರು ಪಟ್ಟು ದೊಡ್ಡದಾದ ಡ್ರ್ಯಾಗನ್ ಪತಂಗವನ್ನು ಹಾರಿಸಿದ ಪರಿಣಾಮ 30 ಅಡಿ​ ಎತ್ತರಕ್ಕೆ ಗಾಳಿಪಟದ ಜತೆ ಹಾರಿರುವ ಈ ಬಾಲಕ ನಂತರ ಗಾಳಿಪಟದ ದಾರ ತುಂಡಾಗಿದ್ದರಿಂದ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ರಭಸವಾಗಿ ಗಾಳಿ ಬೀಸುತ್ತಿತ್ತು. ಬಾಲಕ ಡ್ರ್ಯಾಗನ್​ ಗಾಳಿಪಟದ ತಂತಿಗೆ ಸಿಲುಕಿಕೊಂಡಿದ್ದು ಗಾಳಿಪಟ ತನ್ನ ಜತೆಗೆ ಬಾಲಕನನ್ನೂ ಎಳೆದೊಯ್ದಿದೆ.

- Advertisement -
spot_img

Latest News

error: Content is protected !!