Thursday, June 4, 2026
Homeತಾಜಾ ಸುದ್ದಿನಾಳೆ ಕರ್ನಾಟಕ ಬಂದ್ : ಏನು ಇರುತ್ತೆ..? ಏನು ಇರಲ್ಲ..? ಇಲ್ಲಿದೆ ಮಾಹಿತಿ....

ನಾಳೆ ಕರ್ನಾಟಕ ಬಂದ್ : ಏನು ಇರುತ್ತೆ..? ಏನು ಇರಲ್ಲ..? ಇಲ್ಲಿದೆ ಮಾಹಿತಿ….

- Advertisement -
- Advertisement -

ಬೆಂಗಳೂರು : ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಇನ್ನು ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ, ರೈತಪರ ಸಂಘಟನೆಗಳು ಹಾಗೂ ಹಲವು ಕನ್ನಡ ಸಂಘಟನೆಗಳ ಬಂದ್ ನಿರ್ಧಾರಕ್ಕೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ.

ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅವರು ವಿವಿಧ ಸಂಘಟನೆಗಳ ಜೊತೆಗೆ ಮಹತ್ವದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 5 ರ ನಾಳೆ ಕರ್ನಾಟಕ ಬಂದ್ ಮಾಡುವುದು ಖಚಿತ. ಇದನ್ನು ತಡೆಯಲು ಸಾಧ್ಯವಿಲ್ಲ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಸುತ್ತೇವೆ ಎಂದರು.

ಹಾಗಾದ್ರೆ ನಾಳೆ ಏನಿರುತ್ತೆ ಏನಿರಲ್ಲ ಅನ್ನೋ ಮಾಹಿತಿ ಇಲ್ಲಿದೆ ನೋಡಿ…

ಏನೇನಿರುತ್ತೆ?

ಆಸ್ಪತ್ರೆ,

ಔಷಧ ಅಂಗಡಿ

ಆಂಬುಲೆನ್ಸ್ ಸೇವೆ

 ಹಾಲು, ತರಕಾರಿ

 ದಿನಪತ್ರಿಕೆ

ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇವೆ

ಮೆಟ್ರೋ ಸೇವೆ

ಸರ್ಕಾರಿ ಕಾಲೇಜು, ಖಾಸಗಿ ಕಾಲೇಜು

ಬಾರ್, ವೈನ್ ಶಾಪ್ಸ್

ಏನಿರಲ್ಲ?

ಓಲಾ, ಉಬರ್ ಸೇವೆ ಇರಲ್ಲ

ಆಟೋ, ಟ್ಯಾಕ್ಸಿ ಸೇವೆ ಇರಲ್ಲ ಹೋಟೆಲ್, ಅಂಗಡಿ ಮುಂಗಟ್ಟು ತೆರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ

- Advertisement -

Latest News

error: Content is protected !!