Thursday, June 4, 2026
Homeತಾಜಾ ಸುದ್ದಿಸೆಂಚುರಿ ಬಾರಿಸುವತ್ತ ಟೊಮ್ಯಾಟೋ ದರ

ಸೆಂಚುರಿ ಬಾರಿಸುವತ್ತ ಟೊಮ್ಯಾಟೋ ದರ

- Advertisement -
- Advertisement -

ಬೆಂಗಳೂರು: ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ದಿನೇ ದಿನೇ ಟೊಮ್ಯಾಟೋ ದರ ಹೆಚ್ಚಾಗುತ್ತಿದ್ದು, ಈಗಾಗಲೇ ಪ್ರತಿ ಕಿಲೋಗ್ರಾಂಗೆ 80 ರೂಪಾಯಿ ದಾಟಿದ್ದು, ಬೆಲೆಯ ಹೆಚ್ಚಳದಿಂದಾಗಿ ಗ್ರಾಹಕರು ಕಣ್ಣೀರು ಇಡುವ ಹಾಗೇ ಆಗಿದೆ.

ತೋಟಗಾರಿಕಾ ಉತ್ಪಾದಕರ ಸಹಕಾರಿ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ ಆಫ್ ಲಿಮಿಟೆಡ್ (ಎಚ್‌ಒಪಿಕಾಮ್ಸ್) ದರಪಟ್ಟಿ ಮಂಗಳವಾರ ಟೊಮೆಟೊ ಬೆಲೆ 75 ರೂಪಾಯಿ ಎಂದು ತೋರಿಸಿದ್ದರೂ, ಬೆಂಗಳೂರಿನ ಅನೇಕ ತರಕಾರಿ ಅಂಗಡಿಗಳು ಮತ್ತು ಮಾಲ್‌ಗಳಲ್ಲಿ ಬೆಲೆ ಕೆಜಿಗೆ 100 ರೂಪಾಯಿ ದಾಟಿದೆ.

ಚಂಡಮಾರುತದಿಂದ ಅಕ್ಕಪಕ್ಕದ ರಾಜ್ಯಗಳಲ್ಲಿ ಟೊಮ್ಯಾಟೋ ಬೆಳೆಗೆ ಭಾರಿ ಹಾನಿಯಾಗಿರುವ ಹಿನ್ನಲೆಯಲ್ಲಿ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ.

- Advertisement -

Latest News

error: Content is protected !!