Wednesday, May 8, 2024
Homeಕರಾವಳಿತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆ ಅಭಿವೃದ್ದಿಗೆ ತಕ್ಷಣ ಪ್ರಯತ್ನ: ಕೆ.ಜಿ ಬೋಪಯ್ಯ

ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆ ಅಭಿವೃದ್ದಿಗೆ ತಕ್ಷಣ ಪ್ರಯತ್ನ: ಕೆ.ಜಿ ಬೋಪಯ್ಯ

spot_img
- Advertisement -
- Advertisement -

ಅರಂತೋಡು: ತೊಡಿಕಾನ -ಪಟ್ಟಿ-ಭಾಗಮಂಡಲ ರಸ್ತೆ ಅಭಿವೃದ್ದಿಗಾಗಿ ಸಂಬಂಧಪಟ್ಟ ಮಂತ್ರಿಗಳೊಂದಿಗೆ ಮಾತನಾಡಿ ತಕ್ಷಣ ಪ್ರಯತ್ನಿಸುತ್ತೇನೆ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.

ಅವರು ಪೆರಾಜೆಯಲ್ಲಿ ತೊಡಿಕಾನ-ಪಟ್ಟಿ-ಭಾಗಮಂಡಲ ಸಂಪರ್ಕ ರಸ್ತೆ ಅಭಿವೃದ್ದಿಯ ಬಗ್ಗೆ ತೊಡಿಕಾನ, ಪಟ್ಟಿ, ಅರಂತೋಡು, ಕರಿಕೆ ಗ್ರಾಮಸ್ಥರ ಮನವಿಗಳಿಗೆ ಉತ್ತರಿಸಿದರು.

ಈ ರಸ್ತೆ ಅಭಿವೃದ್ದಿಯಾಗಬೇಕೆಂದು ನಾನು ಶಾಸಕನಾಗುವ ಮೊದಲೇ ಪಯತ್ನ ಮಾಡುತ್ತಿದ್ದೇನೆ. ಅರಣ್ಯದಲ್ಲಿ ರಸ್ತೆ ಹಾದು ಹೋಗುತ್ತಿರುವುದರಿಂದ ರಸ್ತೆ ಅಭಿವೃದ್ದಿಗೆ ವೇಗ ಕಡಿಮೆಯಾಗಿದೆ. ಮೊದಲ ಹಂತದಲ್ಲಿ ಅರಣ್ಯ ಅಧಿಕಾರಿಗಳನ್ನು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಕರೆದು ಮಾತನಾಡುತ್ತೇನೆ. ನಂತರ ಜಿಲ್ಲಾ ಉಸ್ತುವಾರಿ ಸಚಿವರು ಲೋಕೋಪಯೋಗಿ ಹಾಗೂ ಅರಣ್ಯ ಸಚಿವರ ಜತೆ ಮಾತನಾಡುತ್ತೇನೆ. ಅಗತ್ಯ ಬಿದ್ದರೆ ಮುಖ್ಯ ಮಂತ್ರಿಯರ ಜತೆ ಚಚರ್ಿಸಿ ರಸ್ತೆ ಅಭಿವೃದ್ದಿಗೆ ದೊಡ್ಡ ಮಟ್ಟದಲ್ಲಿ ಗಮನ ಹರಿಸುತ್ತೇನೆ ಎಂದು ಹೇಳಿದರು.

ಈ ಸಂದಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ನಮ್ಮ ಶಾಸಕ ಅಂಗಾರ, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ರಸ್ತೆ ಅಭಿವೃದ್ದಿಗೆ ನಾನು ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು. ವಸಂತ ಭಟ್ ತೊಡಿಕಾನ ರಸ್ತೆ ವಿಷಯ ಮತ್ತು ರಸ್ತೆಗೆ ಸಂಬಂಧಪಟ್ಟು ಕಚೇರಿ ಮುಖಾಂತರ ನಡೆದ ಹೋರಾಟವನ್ನು,ಈಗಿನ ಹಂತವನ್ನು ಪ್ರಸ್ತಾವಣೆ ಮಾಡಿದರು.

ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ, ಸುಳ್ಯ ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾಮೇದಪ್ಪ, ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಲಕ್ಷ್ಮಿ ಧರಣೀಧರ, ಉಪಾಧ್ಯಕ್ಷ ನಂಜಪ್ಪ, ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಎ.ಪಿ.ಎಂ.ಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಅರಂತೋಡು-ತೊಡಿಕಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಸದಸ್ಯ ಕೇಶವಪ್ರಸಾದ್ ಗುಂಡಿಗದ್ದೆ, ಎ.ಜಿ ವೆಂಕಟ್ರಮಣ, ಎ.ಸಿ ಹೊನ್ನಪ್ಪ, ಮಡಿಕೇರಿ ಲೊಕೋಪಯೋಗಿ ಇಲಾಖೆಯ ಎ.ಇ.ಇ ಶಿವರಾಮ ಇತರರು ಉಸ್ಥಿತರಿದ್ದರು.

- Advertisement -
spot_img

Latest News

error: Content is protected !!