- Advertisement -
![]()
- Advertisement -
ಬೆಳ್ತಂಗಡಿ : ದಿನವಿಡೀ ನಡೆಸಿದ ಕಾರ್ಯಾಚರಣೆಯ ಬಳಿಕ ಎಸ್.ಐ.ಟಿ ತಂಡ ಮಹಜರು ಮಾಡಿದ ಸಾಕಷ್ಟು ಅವಶೇಷಗಳೊಂದಿಗೆ ಬಂಗ್ಲೆಗುಡ್ಡ ಅರಣ್ಯದಿಂದ ಹೊರ ಬಂದಿದ್ದಾರೆ.
ಸೀಲ್ ಮಾಡಿರುವ ಹಲವಾರು ಬಾಕ್ಸ್ ಗಳನ್ನು ಸೆ.17 ರಂದು ಸಂಜೆ 7 ಗಂಟೆಗೆ ಎಸ್.ಐ.ಟಿ ತಂಡ ಅರಣ್ಯದಿಂದ ಹೊರಕ್ಕೆ ತಂದಿದ್ದಾರೆ. ಎಸ್.ಐ.ಟಿ ಮೂಲಗಳಿಂದ ಲಭಿಸುವ ಮಾಹಿತಿಗಳ ಪ್ರಕಾರ ಒಟ್ಟು ಐದು ತಲೆ ಬುರುಡೆಗಳು ಸೇರಿದಂತೆ ಅಸ್ತಿಪಂಜರಗಳ ಮಹಜರು ಕಾರ್ಯ ಇಂದು ಪೂರ್ಣಗೊಳಿಸಲಾಗಿದೆ. ನಾಳೆಯೂ ಕಾರ್ಯಾಚರಣೆ ಮುಂದುವರಿಯಲಿರುವುದಾಗಿ ಎಸ್.ಐ.ಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
- Advertisement -


