Saturday, June 13, 2026
Homeತಾಜಾ ಸುದ್ದಿಇಂದು ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಲಿರುವ ನಟಿ ರಚಿತಾ ರಾಮ್

ಇಂದು ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಲಿರುವ ನಟಿ ರಚಿತಾ ರಾಮ್

- Advertisement -
- Advertisement -

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ರನ್ನು ಇಂದು ನಟಿ ರಚಿತಾ ರಾಮ್ ಭೇಟಿಯಾಲಿದ್ದಾರೆ ಎನ್ನಲಾಗಿದೆ.  ಡಿ ಬಾಸ್ ದರ್ಶನ್ ಅವರನ್ನು ಭೇಟಿಯಾಗಿ ರಚಿತಾ ರಾಮ್ ಮಾತುಕತೆ ನಡೆಸಲಿದ್ದಾರೆ.ಇನ್ನು ಬುಲ್ ಬುಲ್ ಗೆ ಇತರೆ ನಟ ನಟಿಯರು ಸಾಥ್ ನೀಡಲಿದ್ದಾರೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು A2 ಆರೋಪಿಯಿಂದ A1 ಆರೋಪಿಯನ್ನಾಗಿ ಮಾಡಲು ಇದೀಗ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಹೌದು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಅವರು ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈ ಒಂದು ಪ್ರಕರಣದಲ್ಲಿ ಪವಿತ್ರ ಗೌಡಾಳನ್ನು A1 ಆರೋಪಿನ್ನಾಗಿ ಮಾಡಲಾಗಿದ್ದು, ದರ್ಶನ ಅವರನ್ನು A2 ಆರೋಪಿನ್ನಾಗಿಸಿ ಪ್ರಕರಣ ದಾಖಲಾಗಿತ್ತು.

ಇದೀಗ ನಟ ದರ್ಶನ್ ಅವರನ್ನು A2 ನಿಂದ A1 ಆರೋಪಿಯನ್ನಾಗಿ ಮಾಡಿ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ವೇಳೆ ನಟ ದರ್ಶನ ಅವರನ್ನು A2 ಆರೋಪಿಯನ್ನಾಗಿ ಮಾಡಲಾಗಿತ್ತು. ಅಲ್ಲದೆ ಪವಿತ್ರ ಗೌಡರನ್ನು ಮೊದಲ ಆರೋಪಿ ಮಾಡಲಾಗಿತ್ತು. ಹಾಗಾಗಿ ಇದೀಗ ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

- Advertisement -

Latest News

error: Content is protected !!