Friday, June 5, 2026
Homeತಾಜಾ ಸುದ್ದಿಇಂದು ಅಂತರಾಷ್ಟ್ರೀಯ ಏಡ್ಸ್ ದಿನ- ಬನ್ನಿ ಜಾಗೃತಿ ಮೂಡಿಸೋಣ

ಇಂದು ಅಂತರಾಷ್ಟ್ರೀಯ ಏಡ್ಸ್ ದಿನ- ಬನ್ನಿ ಜಾಗೃತಿ ಮೂಡಿಸೋಣ

- Advertisement -
- Advertisement -

ಬೆಂಗಳೂರು:ವಿಶ್ವವನ್ನು ಕೊರಾನ ಕಾಡಿದ ರೀತಿಯಲ್ಲೇ ಹಲವು ಖಾಯಿಲೆಗಳು ಕಾಡಿ ಕಂಗೆಡಿಸಿವೆ. ಜಗತ್ತು ಆ ಎಲ್ಲಾ ತೊಂದರೆಯನ್ನು ಸಮರ್ಥವಾಗಿ ಎದುರಿಸಿದೆ. ಇಂತಹ ಮಾರಣಾಂತಿಕ ಕಾಯಿಲೆಗಳ ಪೈಕಿ ಒಂದಾದ ಎಚ್‌ಐವಿಯೂ ಒಂದು. ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇಂದಿನ ದಿನವನ್ನು ಅಂತರಾಷ್ಟ್ರೀಯ ಏಡ್ಸ್ ದಿನ ಎಂದು ಆಚರಿಸಿ ಜಾಗೃತಿ ಮೂಡಿಸಲಾಗುತ್ತದೆ.

ಈ ವರ್ಷ “ಎಚ್‌ಐವಿ ಸೋಂಕು ನಿರ್ಮೂಲನೆ; ಪರಿಣಾಮಕಾರಿ ವಿಧಾನದಿಂದ ಕ್ಷಿಪ್ರವಾಗಿ ಸೋಂಕು ಮುಕ್ತರಾಗಿ’ ಎಂಬ ಘೋಷವಾಕ್ಯವನ್ನು ಇಟ್ಟುಕೊಂಡು ಅಂತರಾಷ್ಟ್ರೀಯ ಏಡ್ಸ್ ದಿನ ಆಚರಿಸಲಾಗುತ್ತಿದೆ.೧೯೮೮ರಲ್ಲಿ ಪತ್ತೆಯಾದ ಖಾಯಿಲೆ ವಿಶ್ವವನ್ನೇ ಕಂಗೆಡಿಸಿತ್ತು.

ರೋಗದ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಏಡ್ಸ್ ದಿನವನ್ನು 1988ರ ಡಿಸೆಂಬರ್‌ 1ರಿಂದ ಪ್ರತಿ ವರ್ಷ ಆಚರಿಸುತ್ತಾ ಬಂದಿದೆ. ಸೋಂಕಿನ ಕುರಿತು ಇರುವ ಭಯವನ್ನು ನಿವಾರಿಸಿ,ರೋಗ ಬಾರದಂತೆ ಕೈಗೊಳ್ಳಬೇಕಾದ ಅಗತ್ಯ ಕ್ರಮ, ಚಿಕಿತ್ಸಾ ವಿಧಾನ ಮತ್ತು ರೋಗದ ಲಕ್ಷಣಗಳ ಕುರಿತು ಅರಿವು ಮೂಡಿಸಲು ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.

- Advertisement -

Latest News

error: Content is protected !!