Saturday, May 18, 2024
Homeತಾಜಾ ಸುದ್ದಿಇಂದು ಅಂತರಾಷ್ಟ್ರೀಯ ಹುಲಿ ದಿನ, ಭಾರತದಲ್ಲಿ ಸದ್ಯ ಹುಲಿಗಳ ಅಂಕಿ ಅಂಶಗಳೆಷ್ಟು?

ಇಂದು ಅಂತರಾಷ್ಟ್ರೀಯ ಹುಲಿ ದಿನ, ಭಾರತದಲ್ಲಿ ಸದ್ಯ ಹುಲಿಗಳ ಅಂಕಿ ಅಂಶಗಳೆಷ್ಟು?

spot_img
- Advertisement -
- Advertisement -

ಹುಲಿ ಜಗತ್ತಿನಲ್ಲಿರುವ ಅದ್ಭುತ ಜೀವಜಾಲಗಳಲ್ಲೊಂದಾಗಿದೆ.  ತನ್ನ ದೃಢಕಾಯ ಶರೀರ, ಬಲಿಷ್ಟ ಅಂಗಾಂಗಳಿಂದಲೇ  ಭೀತಿಯನ್ನು ಹುಟ್ಟಿಸುವಂತಹ ಪ್ರಾಣಿ . ಆದರೆ  ಅನೇಕ ಕಾರಣಗಳಿಂದ ಅಳಿವಿನಂಚಿನಲ್ಲಿದ್ದ ಹುಲಿ ಪ್ರಬೇಧಗಳ ರಕ್ಷಣೆಗಾಗಿ ಅವುಗಳನ್ನು ಸಂರಕ್ಷಿಸುವುದು ಅನಿವಾರ್ಯವಾಗಿತ್ತು.

ಆದ್ದರಿಂದ ಹುಲಿಗಳ ಸಂರಕ್ಷಣೆಗಾಗಿಯೇ ಒಂದು ದಿನವನ್ನು ಮೀಸಲಿರಿಸಲಾಯಿತು.  ಆದ್ದರಿಂದ ಜುಲೈ 29ರಂದು  ಅಂತರಾಷ್ಟ್ರೀಯ ಹುಲಿ ದಿನವನ್ನು  ಹಮ್ಮಿಕೊಳ್ಳುತ್ತಾ ಬರಲಾಗಿದೆ.

ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010 ರ ಜುಲೈ 29ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೈಂಟ್ ಪೀಟರ್ ಬರ್ಗ್ ನಲ್ಲಿ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನದಂದು ಹುಲಿ ಸಂರಕ್ಷಣೆ ಕುರಿತು  ವಿವಿಧ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತದೆ. ಗಣತಿಯ ವರದಿಯ ಪ್ರಕಾರ  ವಿಶ್ವದ ಒಟ್ಟು ಹುಲಿ ಗಣತಿಗೆ ಹೋಲಿಸಿದರೆ ಶೇ.70ರಷ್ಟು ಹುಲಿ ಸಂತತಿ ಭಾರತದಲ್ಲೇ ಇದೆ.

ಕಳೆದ ವರ್ಷ ಬಿಡುಗಡೆಯಾದ ಅಖಿಲ ಭಾರತ ಹುಲಿ ಅಂದಾಜು ಫಲಿತಾಂಶಗಳ ವರದಿಯ ಸಾರಾಂಶದ ಪ್ರಕಾರ, 2014 ರಿಂದ 2018 ರವರೆಗೆ ಭಾರತವು ಹುಲಿಗಳ ಸಂಖ್ಯೆಯಲ್ಲಿ 33% ಹೆಚ್ಚಳವನ್ನು ದಾಖಲಿಸಿದೆ.  ಭಾರತದಲ್ಲಿ 2018 ರಲ್ಲಿ 2,967 ಹುಲಿಗಳಿದ್ದರೆ, 2014 ರಲ್ಲಿ 2,226 ಹುಲಿಗಳು ಇದ್ದವು.

 ಪ್ರಸ್ತುತ, ಮೀಸಲು ವ್ಯಾಪ್ತಿಯಲ್ಲಿ ಹುಲಿ ಜನಸಂಖ್ಯೆ 1,923 ಆಗಿದೆ, ಅಂದರೆ 35% ಜನಸಂಖ್ಯೆಯು ಇನ್ನೂ ಹುಲಿ ನಿಕ್ಷೇಪದಿಂದ ಹೊರಗಿದೆ.  ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳಿವೆ (526), ​​ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 524 ಹುಲಿಗಳಿವೆ.  ವಿಶ್ವದಲದಲ್ಲೇ  ಅತ್ಯಧಿಕ  ಹುಲಿಗಳು  ಪಶ್ಚಿಮ ಘಟ್ಟಗಳಲ್ಲಿ (ನಾಗರಹೊಳೆ-ಬಂಡೀಪುರ-ವಯನಾಡ್-  ಮದುಮಲೈ ಸತ್ಯಮಂಗಲಂ-ಬಿಆರ್‌ಟಿ ಬ್ಲಾಕ್) ಕಂಡುಬಂದಿದೆ.  ಇಲ್ಲಿ ಸುಮಾರು 724 ಹುಲಿಗಳಿವೆ.

ವಿಶ್ವದಲ್ಲಿ ಹುಲಿ ಸಂಖ್ಯೆಯ ಶೇ.70 ರಷ್ಟು ಭಾರತದಲ್ಲಿದೆ. 524 ಹುಲಿಗಳೊಂದಿಗೆ ಕರ್ನಾಟಕವು ಭಾರತದಲ್ಲಿ 2ನೇ ಅತಿ ಹೆಚ್ಚು ಹುಲಿಗಳಿಗೆ ನೆಲೆಯಾಗಿದೆ. ಅಂತರರಾಷ್ಟ್ರೀಯ  ಹುಲಿ ದಿನವಾದ ಇಂದು ನಾವು ನಮ್ಮ ಕಾಡುಗಳು ಮತ್ತು ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸಲು ಮತ್ತು ನಮ್ಮ ಜೀವವೈವಿಧ್ಯತೆಯನ್ನು ಉಳಿಸಲು ಪ್ರತಿಜ್ಞೆ ಮಾಡೋಣ ಎಂದು ವೈದ್ಯಕೀಯ ಶಿಕ್ಷಣ  ಸಚಿವರಾದ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ. 

ಇಂದು ವಿಶ್ವದಲ್ಲಿರುವ ಎಲ್ಲಾ ಹುಲಿ ಪ್ರಭೇದಗಳು ಸಂರಕ್ಷಣೆಗೆ ಹರಸಾಹಸ ಮಾಡುತ್ತಿದ್ದರೂ ಕೂಡಾ ಹುಲಿಗಳ ಕಳ್ಳಬೇಟೆ ಮುಂದುವರಿದೇ ಇದೆ. ಅದರ ಹಲ್ಲು, ಚರ್ಮ, ಉಗುರುಗಳು ವಿವಿಧ ಕಾರಣಗಳಿಗಾಗಿ ಅಂತರಾಷ್ಟ್ರೀಯವಾಗಿ  ಕಾನೂನು ವಿರುದ್ಧವಾಗಿ ಕೂಡಾ  ಮಾರಾಟವಾಗುತ್ತಿದೆ.

ಫೋಟೋ ಕೃಪೆ : ಅಕ್ಷತ್ ಭಟ್

- Advertisement -
spot_img

Latest News

error: Content is protected !!