Thursday, June 25, 2026
Homeಕರಾವಳಿಉಡುಪಿಉಡುಪಿ: ಅಕ್ಕಿ ಚೀಲಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವೊಂದರ ಟಯರ್ ಸ್ಫೋಟ..! ತಪ್ಪಿದ ಅನಾಹುತ...!

ಉಡುಪಿ: ಅಕ್ಕಿ ಚೀಲಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವೊಂದರ ಟಯರ್ ಸ್ಫೋಟ..! ತಪ್ಪಿದ ಅನಾಹುತ…!

- Advertisement -
- Advertisement -

ಉಡುಪಿ: ಕೋಟೇಶ್ವರದಿಂದ ಮಂಗಳೂರಿಗೆ ಅಕ್ಕಿ ಚೀಲಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವೊಂದರ ಟಯರ್ ಸ್ಫೋಟಗೊಂಡು, ಪಲ್ಟಿಯಾದ ಘಟನೆ ಮಂಗಳವಾರ ಪಡುಬಿದ್ರಿ ಕಿರು ಸೇತುವೆ ರಾ.ಹೆ 66 ರಲ್ಲಿ ಸಂಭವಿಸಿದೆ.

ಪಿಕಪ್ ವಾಹನ ಚಾಲಕನ ನಿಯಂತ್ರಣ ಕಳೆದು ಕೊಂಡು ಪಲ್ಟಿಯಾಗಿದ್ದು, ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಪಿಕಪ್ ವಾಹನದಲ್ಲಿ ಕೋಟೇಶ್ವರದಿಂದ ಮಂಗಳೂರಿಗೆ ಟೈಗರ್ ಬ್ರಾಂಡ್ ಅಕ್ಕಿ ಹೇರಿಕೊಂಡು ಬರುತ್ತಿದ್ದು, ಇದ್ದಕ್ಕಿದಂತೆ ಟಯರ್ ಸ್ಫೋಟಗೊಂಡು ರಸ್ತೆಗೆ ಉರುಳಿ ಬಿದ್ದಿದೆ.

ಆ ಸಂದರ್ಭ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಸಂಚರಿಸದೆ ಇದ್ದುದರಿಂದ ಬಾರೀ ದುರಂತವೊಂದು ತಪ್ಪಿದೆ ಎನ್ನುತ್ತಾರೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ರಸ್ತೆಗಡ್ಡವಾಗಿ ಉರುಳಿದ ವಾಹನ ತೆರವು ಕಾರ್ಯ ನಡೆಸಿದ್ದಾರೆ.

- Advertisement -

Latest News

error: Content is protected !!