Thursday, June 4, 2026
Homeತಾಜಾ ಸುದ್ದಿಬಜಪೆ: ಶಾಲಾ ಬಸ್‌ಗೆ ಟಿಪ್ಪರ್‌ ಡಿಕ್ಕಿ: ಮೂವರು ಮಕ್ಕಳು ಸೇರಿ ಬಸ್‌ ನಿರ್ವಾಹಕನಿಗೆ ಗಾಯ

ಬಜಪೆ: ಶಾಲಾ ಬಸ್‌ಗೆ ಟಿಪ್ಪರ್‌ ಡಿಕ್ಕಿ: ಮೂವರು ಮಕ್ಕಳು ಸೇರಿ ಬಸ್‌ ನಿರ್ವಾಹಕನಿಗೆ ಗಾಯ

- Advertisement -
- Advertisement -

ಬಜಪೆ : ಶಾಲಾ ಬಸ್‌ಗೆ ಟಿಪ್ಪರ್ ಡಿಕ್ಕಿಯಾದ ಘಟನೆ ಗುರುಪುರದ ಅಣೆ ಬಳಿ ನಿನ್ನೆ ಸಂಜೆ ನಡೆದಿದೆ. ಘಟನೆಯಲ್ಲಿ ಬಸ್‌ನ ನಿರ್ವಾಹಕ ಹಾಗೂ ಇತರ ಮೂವರು ಮಕ್ಕಳಿಗೆ ಗಾಯಗಳಾಗಿದೆ.

ಎರಡೂ ವಾಹನಗಳು ಮಂಗಳೂರಿನತ್ತ ಸಾಗುತ್ತಿತ್ತು. ವೇಗವಾಗಿದ್ದ ಟಿಪ್ಪರ್, ಶಾಲಾ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಟಿಪ್ಪರ್ ಎದುರು ಭಾಗವು ನುಜ್ಜುಗುಜ್ಜಾಗಿದೆ. ನಿರ್ವಾಹಕ ಮೋನು ಬಸ್‌ನ ಫುಟ್‌ಬೋಡ್‌ರ್ನಿಂದ ಕೆಳಗಡೆ ಬಿದ್ದು ಗಾಯಗೊಂಡಿದ್ದಾರೆ. ಮೋನು ಅವರ ಕಾಲು ಮತ್ತು ತಲೆಗೆ ಗಂಭೀರ ಗಾಯವಾಗಿದೆ. ಡಿಕ್ಕಿಯಾದ ರಭಸಕ್ಕೆ ಬಸ್‌ನೊಳಗಿದ್ದ ಮೂವರು ಮಕ್ಕಳಿಗೆ ಗಾಯವಾಗಿದೆ. ಗಾಯಾಳು ನಾಲ್ವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಶಾಲಾ ಬಸ್‌ನ ನಿರ್ವಾಹಕಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!