Wednesday, May 8, 2024
Homeಕರಾವಳಿಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ 'ಓಲಿವರ್' ಹುಲಿ ದಿಢೀರ್ ಸಾವು..!

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ‘ಓಲಿವರ್’ ಹುಲಿ ದಿಢೀರ್ ಸಾವು..!

spot_img
- Advertisement -
- Advertisement -

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ 9 ವರ್ಷದ ‘ಓಲಿವರ್’ ಹುಲಿ ಇಂದು ಮುಂಜಾನೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಓಲಿವರ್ ಹುಲಿಯು ಮುಂಜಾನೆವರೆಗೆ ಸದೃಢವಾಗಿತ್ತು. ಆದರೆ ಒಮ್ಮೆಲೇ ಕುಸಿದುಬಿದ್ದಿದ್ದು, ತಕ್ಷಣ ಜೀವ ಉಳಿಸಲು ಮೃಗಾಲಯದ ವೈದ್ಯಧಿಕಾರಿಗಳು ಚಿಕಿತ್ಸೆ ನೀಡಿದರೂ ಜೀವ ಉಳಿಸಲು ಆಗಲಿಲ್ಲ. ಇನ್ನು ಒಲಿವರ್, ಪಿಲಿಕುಲ ಮೃಗಾಲಯದ ವಿಕ್ರಮ ಹಾಗೂ ಶಾಂಭವಿ ಹೆಸರಿನ ಜೋಡಿ ಹುಲಿಗಳಿಗೆ ಜನಿಸಿದ ಎರಡು ಮರಿಗಳಲ್ಲಿ ಒಂದಾಗಿದ್ದು, ಪ್ರಸ್ತುತ ಉದ್ಯಾನವನದಲ್ಲಿ 12 ಹುಲಿಗಳಿವೆ.

ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಪರೀಕ್ಷೆಗೆ ಬೆಂಗಳೂರು ಹಾಗೂ ಉತ್ತರಪ್ರದೇಶದ ಐವಿಆರ್‌‌ಐಗೆ ಕಳುಹಿಸಲಾಗಿದೆ.

ಇನ್ನು ಮೃಗಾಲಯದಲ್ಲಿ ಯಾವುದೇ ರೋಗಗಳು ಹರಡದಂತೆ ರೋಗನಿರೋಧಕ ದ್ರಾವಣಗಳನ್ನು ಪ್ರಾಣಿಗಳ ಆವರಣದ ಒಳಗೆ ಮತ್ತು ಸುತ್ತಮುತ್ತ ಸಿಂಪಡಿಸಲಾಗುತ್ತದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್ ಜೆ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!