Friday, June 5, 2026
Homeಅಪರಾಧಉಳ್ಳಾಲ: ದೈವ, ದೇವಸ್ಥಾನಗಳಲ್ಲಿ ಅಪಚಾರ ಎಸಗಿದ ಆರೋಪಿಯ ಮನೆ ಮೇಲೆ ಕಲ್ಲು ತೂರಾಟ..

ಉಳ್ಳಾಲ: ದೈವ, ದೇವಸ್ಥಾನಗಳಲ್ಲಿ ಅಪಚಾರ ಎಸಗಿದ ಆರೋಪಿಯ ಮನೆ ಮೇಲೆ ಕಲ್ಲು ತೂರಾಟ..

- Advertisement -
- Advertisement -

ಉಳ್ಳಾಲ: ಕಾರಣಿಕ ಕೊರಗಜ್ಜನ ಕ್ಷೇತ್ರ ಸೇರಿದಂತೆ ಹಲವಾರು ದೈವ, ದೇವಸ್ಥಾನ, ಮಸೀದಿಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದು ಸಿಕ್ಕಿಬಿದ್ದ ದೇವದಾಸ್ ದೇಸಾಯಿ ಉಳಿದುಕೊಂಡಿದ್ದ ಕೋಟೆಕಾರಿನ ಮನೆಗೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ.

ಮಂಗಳೂರು ಆಸುಪಾಸಿನ ಕೊರಗಜ್ಜನ ಕ್ಷೇತ್ರ ಸೇರಿದಂತೆ ದೈವ, ದೇವಸ್ಥಾನ, ಮಸೀದಿಗಳ ಕಾಣಿಕೆ ಹುಂಡಿಗೆ ಕಾಂಡೋಮ್‌, ಮಿಷನರಿ ಪ್ರೇರಿತ ಕರಪತ್ರಗಳನ್ನ ಇರಿಸಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಹುಬ್ಬಳ್ಳಿ ಮೂಲದ ದೇವದಾಸ್ ದೇಸಾಯಿಯನ್ನು ಪೊಲೀಸರು ಬಂಧಿಸಿದ್ದರು. ಕ್ರೈಸ್ತನಾಗಿ ಮತಾಂತರಗೊಂಡಿದ್ದ ದೇವದಾಸ್ ಕೋಟೆಕಾರು ಗ್ರಾಮದ ಮಿತ್ರನಗರ ಎಂಬಲ್ಲಿ ಮನೆ ಹೊಂದಿದ್ದು ಒಬ್ಬಂಟಿಯಾಗಿ ವಾಸಿಸುತ್ತಿದ್ದ.

ಕೊರಗಜ್ಜ ದೈವಕ್ಕೆ ನಿರಂತರ ಅಪಚಾರ ಎಸಗುತ್ತಿದ್ದ ಆರೋಪಿ ದೇವದಾಸ್ ಬಂಧನವಾಗುತ್ತಿದ್ದಂತೆ ಹಿಂದು ಸಂಘಟನೆಯ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತ್ತು. ನಿನ್ನೆ ಸಂಜೆ ಮಿತ್ರನಗರದಲ್ಲಿರುವ ದೇವದಾಸ್ ಮನೆಗೆ ಉದ್ರಿಕ್ತ ಹಿಂದು ಕಾರ್ಯಕರ್ತರು ಕಲ್ಲೆಸೆದಿದ್ದು ಮನೆಯ ಆವರಣ ಗೋಡೆಯ ಸಿಮೆಂಟ್ ನಿರ್ಮಿತ ಗೋಲದ ಆಕೃತಿಯನ್ನ ಪುಡಿಗೈದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಉಳ್ಳಾಲ ಪೊಲೀಸ್ ಠಾಣಾ ಪಿಐ ಸಂದೀಪ್, ಪಿಎಸ್ ಐ ಪ್ರದೀಪ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಆರೋಪಿ ದೇವದಾಸ್ ಮನೆಗೆ ಬಂದೋಬಸ್ತ್ ನೀಡಿದ್ದಾರೆ.

- Advertisement -

Latest News

error: Content is protected !!