- Advertisement -


- Advertisement -
ಮೂಡುಬಿದಿರೆ: ಇಲ್ಲಿನ ಪೊಣ್ಣೆಚ್ಚಾರಿ ಬಸ್ ತಂಗುದಾಣದಲ್ಲಿ ಗುರುವಾರ ಅಪರಿಚಿತ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿದೆ.
ಕಳೆದ ಕೆಲವು ದಿನಗಳಿಂದ ಇವರು ಇದೇ ಬಸ್ ನಿಲ್ದಾಣದಲ್ಲಿ ಹಗಲು-ರಾತ್ರಿ ಕಳೆಯುತ್ತಿದ್ದರು ಎಂದು ತಿಳಿದುಬಂದಿದೆ. ಅವರ ಬಳಿಯಿದ್ದ ಒಂದು ಚೀಲದಲ್ಲಿ ಬಟ್ಟೆಬರೆಗಳು ಪತ್ತೆಯಾಗಿದ್ದು, ಇವರು ಮನೆ ಬಿಟ್ಟು ಬಂದಿರಬಹುದು ಎಂದು ಶಂಕಿಸಲಾಗಿದೆ.
ವಿಷಯ ತಿಳಿದ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಶವವನ್ನು ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ವೃದ್ಧರ ಗುರುತು ಮತ್ತು ಅವರು ಯಾವ ಊರಿನವರು ಎಂಬ ಮಾಹಿತಿ ಇನ್ನು ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
- Advertisement -


