Friday, June 5, 2026
Homeತಾಜಾ ಸುದ್ದಿಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆ- ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆ- ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಕಾರ್ಕಳ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ರತ್ನ ತಿಪ್ಪೇಶ ವಾಲ್ಮೀಕಿ (32), ಮಕ್ಕಳಾದ ಕೈಲಾಶ್ ಕುಮಾರ್ (10) ಮಗಳು ನಮಿತಾ (5) ಎಂದು ತಿಳಿದು ಬಂದಿದ್ದು.

ನಂದಳಿಕೆ ಗ್ರಾಮದ ವಿಲ್ಡಾ ಬಾಯಿಯವರ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದರು. ಡಿಸೆಂಬರ್ 24ರ ಸಂಜೆಯಿಂದ ರಾತ್ರಿ 7.30ರ ನಡುವೆ ಈ ಘಟನೆ ನಡೆದಿದೆ.

ಇವರೆಲ್ಲರೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಾಲಿ ಗ್ರಾಮದವರಾಗಿದ್ದಾರೆ. ಈ ಕುರಿತು ರತ್ನ ಅವರ ಪತಿ ತಿಪ್ಪೇಶ್ ಪಕ್ಕೀರಪ್ಪ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.

- Advertisement -

Latest News

error: Content is protected !!