Wednesday, June 24, 2026
Homeಕರಾವಳಿಮಂಗಳೂರುಸುರತ್ಕಲ್: ಬೀಚ್ ಪ್ರವಾಸಕ್ಕೆ ಬಂದು ಮೂವರು ನೀರುಪಾಲು, ಓರ್ವನ ರಕ್ಷಣೆ

ಸುರತ್ಕಲ್: ಬೀಚ್ ಪ್ರವಾಸಕ್ಕೆ ಬಂದು ಮೂವರು ನೀರುಪಾಲು, ಓರ್ವನ ರಕ್ಷಣೆ

- Advertisement -
- Advertisement -

ಸುರತ್ಕಲ್: ಬೀಚ್ ಗೆ ಪ್ರವಾಸಕ್ಕೆ ಎಂದು ಬಂದಿದ್ದ ನಾಲ್ವರ ಪೈಕಿ ಮೂವರು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ.

ಮಂಗಳೂರು ನಗರದ ಹೊರವಲಯದ ಕುಳಾಯಿ ಸಮೀಪದ ಹೊಸಬೆಟ್ಟು ಬೀಚ್ ಬಳಿ ಈ ಅನಾಹುತ ಸಂಭವಿಸಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಬೆಂಗಳೂರಿನಿಂದ ನಿನ್ನೆ ನಾಲ್ವರು ಪ್ರವಾಸಕ್ಕಾಗಿ ಬಂದಿದ್ದು, ಬೀದರ್ ಜಿಲ್ಲೆಯ ಪರಮೇಶ್ವರ್ (30) ರಕ್ಷಿಸಲ್ಪಟ್ಟಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಮಂಜುನಾಥ್ ಎಸ್, ಶಿವಮೊಗ್ಗ ಜಿಲ್ಲೆಯ ಶಿವಕುಮಾರ್ ಮತ್ತು ಬೆಂಗಳೂರಿನ‌ ಸತ್ಯವೇಲು ಸಾವನ್ನಪ್ಪಿದ್ದಾರೆ.

ಶಿವಕುಮಾರ್ ಮತ್ತು ಸತ್ಯವೇಲು ಮೃತದೇಹಗಳು ಪತ್ತೆಯಾಗಿದ್ದು, ಮಂಜುನಾಥ್ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗಿದೆ.‌ ಘಟನಾ ಸ್ಥಳಕ್ಕೆ ಸುರತ್ಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‌

- Advertisement -

Latest News

error: Content is protected !!