Thursday, June 4, 2026
Homeಕರಾವಳಿಮಂಗಳೂರುಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ತಿರುನಲ್ವೇಲಿಯಲ್ಲಿ ಮೂವರು ದರೋಡೆಕೋರು ಅರೆಸ್ಟ್

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ತಿರುನಲ್ವೇಲಿಯಲ್ಲಿ ಮೂವರು ದರೋಡೆಕೋರು ಅರೆಸ್ಟ್

- Advertisement -
- Advertisement -

ಮಂಗಳೂರು; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತಮಿಳುನಾಡು ಮೂಲದ ಮುರುಗಂಡಿ ದೇವರ್, ಪ್ರಕಾಶ್ ಅಲಿಯಾಸ್ ಜೋಶ್ವಾ ,ಮನಿವೆನನ್ ಬಂಧಿತರು. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಈ ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ದರೋಡೆ ಮಾಡಿದ ಬಳಿಕ  ದರೋಡೆಕೋರರು ತಮಿಳುನಾಡಿನ ತಿರುನಲ್ವೇಲಿಗೆ ಪರಾರಿಯಾಗಿದ್ದು, ಬಂಧಿತರಿಂದ ಹಣ, ತಲವಾರು, ಎರಡು ಪಿಸ್ತೂಲ್ ಮತ್ತು ಎರಡು ಗೋಣಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬ್ಯಾಂಕ್​ನಲ್ಲಿ ಸುಮಾರು 10ರಿಂದ 12 ಕೋಟಿಯನ್ನು ದರೋಡೆ ಮಾಡಿದ ಬಳಿಕ ಆರೋಪಿಗಳು ತಿರುವನ್ವೇಲಿಗೆ ಪರಾರಿಯಾಗಿದ್ದರು. ಇದೀಗ ಮಂಗಳೂರು ಪೊಲೀಸರು ಕಾರ್ಯಚರಣೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಖುದ್ದು ಮಂಗಳೂರು ಪೊಲೀಸ್​​ ಆಯುಕ್ತ ಅನುಪಮ್ ಅಗರ್ವಾಲ್​ ಖಚಿತಪಡಿಸಿದ್ದು, ಮುಂಬೈ ಮೂಲದ ಗ್ಯಾಂಗ್ ನಿಂದ ದರೋಡೆಯಾಗಿದ್ದು, ಬಂಧಿತರಿಂದ ಕಳ್ಳತನಕ್ಕೆ ಬಳಸಿದ್ದ ಫಿಯೆಟ್ ಕಾರು, ಹಣ, ಚಿನ್ನ ತುಂಬಿಕೊಂಡು ಹೋಗಿದ್ದ ಎರಡು ಗೋಣಿ ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದರೋಡೆಕೋರರ ಬಂಧನದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ಮಾಹಿತಿ ನೀಡಿದ್ದು, ತಮಿಳುನಾಡಿನ ವಿವಿಧ ಪ್ರದೇಶದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. ಮುರುಗನ್, ಪ್ರಕಾಶ್ ಅಲಿಯಾಸ್ ಜೈಸ್ವಾ, ಮಣಿವಣ್ಣನ್ ಬಂಧಿತರು. ಬಂಧಿತರಿಂದ 2 ಗೋಣಿಚೀಲ, ತಲ್ವಾರ್‌, 2 ಪಿಸ್ತೂಲ್‌ ಜಪ್ತಿ ಮಾಡಿದ್ದೇವೆ. ಬಂಧಿತ ಆರೋಪಿಗಳು ತಮಿಳುನಾಡಿನ ತಿರುನೆಲ್ವೇಲಿ ಮೂಲದವರು ಎಂದು ಸ್ಪಷ್ಟಪಡಿಸಿದ್ದಾರೆ

- Advertisement -

Latest News

error: Content is protected !!