Thursday, June 4, 2026
Homeತಾಜಾ ಸುದ್ದಿನಾಲಿಗೆ ಕಟ್‌ ಮಾಡ್ತೇವೆ ಹುಷಾರ್‌ ಮಗನೇ: ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಪತ್ರ

ನಾಲಿಗೆ ಕಟ್‌ ಮಾಡ್ತೇವೆ ಹುಷಾರ್‌ ಮಗನೇ: ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಪತ್ರ

- Advertisement -
- Advertisement -

ಶಿವಮೊಗ್ಗಮಾಜಿ ಸಚಿವ ಕೆಎಸ್ ಈಶ್ವರಪ್ಪರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಪತ್ರದಲ್ಲಿ ಮಗನೇ ನಿನ್ನ ನಾಲಿಗೆ ಕಟ್‌ ಮಾಡ್ತೇವೆ ಹುಷಾರ್‌ ಎಂದು ಬರೆಯಲಾಗಿದೆ.

 ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪ ಮನೆಗೆ ಅನಾಮಧೇಯ ಪತ್ರ ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.  ಮುಸ್ಲಿಂರನ್ನು ಗೂಂಡಾಗಳು ಎಂದು ಕರೆಯುವ ನಿನ್ನನ್ನು ಬಿಡುವುದಿಲ್ಲ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆ ಬೆನ್ನೂರಿನಲ್ಲಿ ಕಾಲೇಜು ಕಟ್ಟಲು ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಗಳನ್ನು ಬಳಸುತ್ತಿದ್ದೀರಾ. ಆದರೂ ನಿಮಗೆ ಮುಸ್ಲಿಂರು ಬೇಡ. ನಿನಗೆ ನಾಚಿಕೆಯಾಗಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ. 

- Advertisement -

Latest News

error: Content is protected !!