Friday, June 14, 2024
Homeತಾಜಾ ಸುದ್ದಿಹುಬ್ಬಳ್ಳಿ ಗಲಭೆಗೆ ಕಾರಣರಾದವರನ್ನು ಬಂಧಿಸಿ, ಗಡಿಪಾರು ಮಾಡಬೇಕು: ಕೆ.ಎಸ್. ಈಶ್ವರಪ್ಪ

ಹುಬ್ಬಳ್ಳಿ ಗಲಭೆಗೆ ಕಾರಣರಾದವರನ್ನು ಬಂಧಿಸಿ, ಗಡಿಪಾರು ಮಾಡಬೇಕು: ಕೆ.ಎಸ್. ಈಶ್ವರಪ್ಪ

spot_img
- Advertisement -
- Advertisement -

ಶಿವಮೊಗ್ಗ: ಶಾಂತವಾಗಿದ್ದ ಕರ್ನಾಟಕದಲ್ಲಿ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಷಡ್ಯಂತ್ರವಿದೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಪ್ರಕರಣವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಶಾಂತವಾಗಿದ್ದ ಕರ್ನಾಟಕದಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೂಡ ಮೌಲ್ವಿ ಪಕ್ಕದಲ್ಲೇ ನಿಂತಿದ್ದಾರೆ. ಅಲ್ತಾಫ್ ಹಳ್ಳೂರು ಕಲ್ಲು ಹೊಡೆದಿರುವುದನ್ನು ನೋಡಿದ್ದೇನೆ. ಅಲ್ತಾಫ್ ಹಳ್ಳೂರು ಅವರನ್ನು ಸರ್ಕಾರ ತಕ್ಷಣವೇ ಬಂಧಿಸಬೇಕು. ತಲೆ ಮರೆಸಿಕೊಂಡ ಮೌಲ್ವಿ ಬಂಧನಕ್ಕೆ ಕೇಂದ್ರ ಸರ್ಕಾರವು ಕೂಡ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ಗಲಭೆಗೆ ಕಾರಣರಾದವನರನು ಕೂಡಲೇ ಬಂಧಿಸಬೇಕು. ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಆಕ್ರೋಶ ಹೊರ ಹಾಕಿರುವ ಈಶ್ವರಪ್ಪ, ಕೆಮಿಷನ್ ಪಡೆದಿರುವುದಕ್ಕೆ ಯಾರು ರಶೀದಿ ಕೊಡಲ್ಲ. ಆದರೆ ಯಾರಿಗೆ ಕಮಿಷನ್ ಕೊಟ್ಟಿದ್ದಾರೆಂದು ಬಹಿರಂಗಪಡಿಸಿ, ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ರಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

- Advertisement -
spot_img

Latest News

error: Content is protected !!