Thursday, July 16, 2026
Homeಕರಾವಳಿಮಂಗಳೂರುಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ  ಕಳ್ಳರ ಕೈ ಚಳಕ; ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು...

ಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ  ಕಳ್ಳರ ಕೈ ಚಳಕ; ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿ

- Advertisement -
- Advertisement -

ಬೆಳ್ತಂಗಡಿ: ರಾತ್ರೋರಾತ್ರಿ ಬೆಳ್ತಂಗಡಿ ನಗರದ ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿಯಾದ ಘಟನೆ ಮೇ.18 ರಂದು ರಾತ್ರಿ ನಡೆದಿದೆ.

ಬೆಳ್ತಂಗಡಿ ಕೋರ್ಟ್ ರಸ್ತೆಯ ಧರ್ಮಶ್ರೀ ಬಿಲ್ಡಿಂಗ್ ನ ಸಮೃದ್ಧಿ ಎಂಟರ್ಪ್ರೈಸಸ್ ನಿಂದ ಸುಮಾರು 1.50 ಲಕ್ಷ  ನಗದು ಹಾಗೂ ಸಿಸಿ ಕ್ಯಾಮೆರಾ ವನ್ನು ಹಾನಿಗೊಳಿಸಿ ಮೆಮೊರಿ ಕಾರ್ಡ್ ನ್ನು ಪಡೆದು ಪರಾರಿಯಾಗಿದ್ದಾರೆ. ಹಾಗೂ ಅದೇ ಕಟ್ಟಡದ  ಮಹಮ್ಮದ್ ಹನೀಫ್ ರವರ ಟಿ.ಎಚ್ ರಿಯಲ್ ಎಸ್ಟೇಟ್ ಕಚೇರಿ, ಕಟ್ಟಡ ಮಾಲಕರ ಕಚೇರಿ ಸೇರಿದಂತೆ ವಕೀಲರುಗಳಾದ ರಾಧಾಕೃಷ್ಣ , ಉಷಾ ಎನ್.ಜಿ, ಯತೀಶ್ ಶೆಟ್ಟಿ ಪಿ ಕಚೇರಿಗಳಿಗೆ  ನುಗ್ಗಿದ್ದಾರೆ.

ಮೂರು ಮಾರ್ಗದ ಬಳಿ ಇರುವ ಮಾತೃಶ್ರೀ ಹೋಟೆಲ್  ನಿಂದ ಡಬ್ಬಿಯಿಂದ ರೂ.5000 ಹಾಗೂ ಡ್ರಾವರ್ ನಿಂದ 2000ಸಾವಿರ, ಶಬರಿ ಎಂಟರ್ಪ್ರೈಸಸ್ ಸುಮಾರು 2ಸಾವಿರ, ಜಯರಾಮ ಮಣಿಯಾಣಿ ವಕೀಲರ ಕಚೇರಿ, ಮೆ| ಹಿಮಾಲಯ ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ , ಜಿತೇಶ್ ಕೆ ವಕೀಲರ ಕಚೇರಿಗೆ ನುಗ್ಗಿದ್ದಾರೆ. ಘಟನಾ ಸ್ಥಳಗಳಿಗೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!