- Advertisement -
![]()
- Advertisement -
ಬೆಳ್ತಂಗಡಿ: ಶಟರ್ ಮುರಿದು ಅಡಿಕೆ ಅಂಗಡಿಯೊಳಗೆ ಕಳ್ಳರು ನುಗ್ಗಿದ ಘಟನೆ ಏ.8 ರಂದು (ಮಂಗಳವಾರ) ನಡೆದಿದೆ.
ಬೆಳ್ತಂಗಡಿ ನಗರದ ಸಂತೆಕಟ್ಟೆ ಬಳಿಯ ಅಡಿಕೆ ಅಂಗಡಿಗೆ ಮಧ್ಯರಾತ್ರಿ ಅಂಗಡಿಯ ಒಂದು ಬದಿಯ ಶಟರ್ ಮುರಿದು ಒಳ ಹೊಕ್ಕ ಕಳ್ಳರು ಅಂಗಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಮಂಗಳವಾರ ಬೆಳಗ್ಗೆ ಶಟರ್ ಮುರಿದಿರುವುದು ಸ್ಥಳೀಯರು ನೋಡಿ ಮಾಲಕರಿಗೆ ವಿಷಯ ತಿಳಿಸಿದ್ದು, ಅವರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ಠಾಣೆಯ ಪ್ರಮೋದ್, ಕುಶಾಲಪ್ಪ ಯಂ. ಶಿವಾನಂದ , ಗಿರೀಶ್, ಸ್ಥಳಕ್ಕೆ ಆಗಮಿಸಿದ್ದು, ಸುತ್ತ ಮುತ್ತ ಹಾಗೂ ಅಂಗಡಿಯಲ್ಲಿರುವ ಸಿ.ಸಿ. ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ.
ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆ ಸುಮಾರಿಗೆ , ಮೂವರು ಸೇರಿ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ನಗದು ಸೇರಿದಂತೆ ಏನೆಲ್ಲಾ ಕಳ್ಳತನ ಆಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
- Advertisement -


