Wednesday, June 24, 2026
Homeಕರಾವಳಿಮಂಗಳೂರುಪುತ್ತೂರು: ಬಲ್ನಾಡಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ, ನಗದು, ಕಳ್ಳತನ ಮಾಡಿದ ಕಳ್ಳರು

ಪುತ್ತೂರು: ಬಲ್ನಾಡಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ, ನಗದು, ಕಳ್ಳತನ ಮಾಡಿದ ಕಳ್ಳರು

- Advertisement -
- Advertisement -

ಪುತ್ತೂರು:  ಮನೆಗೆ ನುಗ್ಗಿ ಕಳ್ಳರು ಚಿನ್ನಾಭರಣ, ನಗದು, ಕಳ್ಳತನ ಮಾಡಿದ ಘಟನೆ ಬಲ್ನಾಡಿನ ಪಾಲೆಚ್ಚಾರ್ ಎಂಬಲ್ಲಿ ನಡೆದಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿವಂಗತ ಆನಂದ ನಾಯ್ಕ ಅವರ ಪತ್ನಿ ಉಮಾವತಿ ಅವರು ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕುದ್ದುಪದವುಎಂಬಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಉಮಾವತಿಯವರು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಅವರ ಪತಿ ನಿಧನರಾದ ನಂತರ, ಅವರು ಕೆಲ ಸಮಯ ತಾಯಿ ಮನೆಯಲ್ಲಿ ವಾಸವಾಗಿದ್ದರು. ಅಕ್ಟೋಬರ್‌ 22 ರಂದು ಪಾಲೆಚ್ಚಾರುವಿನಲ್ಲಿರುವ ತಮ್ಮ ಮನೆಗೆ ಬಂದು

ಹೋಗಿದ್ದ ಉಮಾವತಿ ಅವರು, ನವೆಂಬರ್‌ 5 ರಂದು ಮತ್ತೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ

ಬಂದಿದೆ.

- Advertisement -

Latest News

error: Content is protected !!