- Advertisement -
- Advertisement -
ಮುಂಬೈ: ಇಲ್ಲಿನ ಬೊರಿವಲಿಯಲ್ಲಿ ಕಳ್ಳನೋರ್ವ ದೇವರ ಮುಂದೆ ಕೈಮುಗಿದು ಕ್ಷಮೆಯಾಚಿಸಿ ದೇವರ ಬೆಳ್ಳಿಯ ಕಿರೀಟವನ್ನೇ ಎಗರಿಸಿದ ಆಘಾತಕಾರಿ ಘಟನೆಯೊಂದು ನಡೆದಿದೆ.
ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ಬೊರಿವಲಿಯಲ್ಲಿರುವ ವಿಠ್ಠಲ ದೇವಸ್ಥಾನಕ್ಕೆ ಭಕ್ತನ ರೂಪದಲ್ಲಿ ಬಂದ ವ್ಯಕ್ತಿಯೋರ್ವ ದೇವರ ಎದುರು ಕೈಮುಗಿದು ಏನೋ ಬೇಡಿಕೊಂಡಿದ್ದಾನೆ ಇದಾದ ಬಳಿಕ ಅಲ್ಲಿ ಯಾರೂ ಇಲ್ಲದಿರುವುದನ್ನು ಕಂಡ ಯುವಕ ದೇವರ ಶಿರದ ಮೇಲಿರುವ ಬೆಳ್ಳಿಯ ಕಿರೀಟವನ್ನು ಎಗರಿಸಿದ್ದಾನೆ.
ದೇವಸ್ಥಾನದಲ್ಲಿನ ಸಿಸಿ ಕ್ಯಾಮೆರಾದಲ್ಲಿ ಯುವಕ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ದೃಶ್ಯ ಸೆರೆಯಾಗಿದ್ದು ಕಳ್ಳನ ಕೈಚಳಕಕ್ಕೆ ಜನ ಬೆರಗಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೇವಳದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯ ಪತ್ತೆಗೆ ದೇವಸ್ಥಾನದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ.
- Advertisement -