Saturday, June 6, 2026
Homeಕರಾವಳಿಮಂಗಳೂರು : ನ.12 ರಿಂದ ಮತ್ತೆ ಮೂರು ದಿನ ಮಂಗಳೂರಿಗೆ ನೀರಿಲ್ಲ!

ಮಂಗಳೂರು : ನ.12 ರಿಂದ ಮತ್ತೆ ಮೂರು ದಿನ ಮಂಗಳೂರಿಗೆ ನೀರಿಲ್ಲ!

- Advertisement -
- Advertisement -

ಮಂಗಳೂರು : ನ.12ರಂದು ಬೆಳಗ್ಗೆ 6ರಿಂದ ನ.14ರ ಬೆಳಗ್ಗೆ 6ರವರೆಗೆ ತುಂಬೆಯಲ್ಲಿ ಜಾಕ್ವೆಲ್ ಬದಲಾವಣೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಲಿನೆಗಳ ದುರಸ್ತಿ ಕಾರ್ಯ ಇರುವುದರಿಂದ ೧೮ ವಾರ್ಡ್ ಗಳಲ್ಲಿ ನೀರು ಸರಬರಾಜು ಇರುವುದಿಲ್ಲ.

ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್‌ಎಲ್‌ಪಿಎಸ್ 1-18ಎಂಎನ್‌ಡಿ ರೇಚಕ ಸ್ಥಾವರದ ಜಾಕ್‌ವೆಲ್ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಸುರತ್ಕಲ್, ಕಾಟಿಪಳ್ಳ, ಎನ್‌ಐಟಿಕೆ, ಎಂಸಿಎಫ್, ಕೂಳೂರು, ಕಾವೂರು, ಕೋಡಿಕಲ್ ಭಾಗಶಃ, ಪಿವಿಎಸ್, ಲೇಡಿಹಿಲ್, ಬಂದರ್, ಕಾರ್‌ಸ್ಟ್ರೀಟ್, ಕುದ್ರೋಳಿ, ಬೋಳೂರು, ಮೇರಿಹಿಲ್, ಪಚ್ಚನಾಡಿ, ಅಶೋಕ ನಗರ, ದೇರೆಬೈಲ್, ಕೋಡಿಯಾಲ್‌ ಬೈಲ್ ಹಾಗೂ ಕದ್ರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮನಪಾ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!