Monday, May 20, 2024
Homeಕರಾವಳಿಉಡುಪಿರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಚಿಂತನೆ ಇಲ್ಲ:ಸಚಿವ ಸುನಿಲ್ ಕುಮಾರ್

ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಚಿಂತನೆ ಇಲ್ಲ:ಸಚಿವ ಸುನಿಲ್ ಕುಮಾರ್

spot_img
- Advertisement -
- Advertisement -

ಬೆಂಗಳೂರು:ರೈತರು ಬಳಸುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ಕಚೇರಿಯಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು,ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸುವ ಯಾವುದೇ ಚಿಂತನೆ ಇಲ್ಲ. ಈ ಸಂಬಂಧ ಇರುವ ಊಹಾಪೋಹಗಳಿಗೆ ರೈತರು ಕಿವಿಗೊಡಬಾರದು. ಇಲಾಖೆಯನ್ನು ಜನ ಸ್ನೇಹಿಯಾಗಿಸುವುದು ನಮ್ಮ ಮುಂದಿರುವ ಸವಾಲಾಗಿದೆ.ಲೈನ್‌ಮನ್‌ಗಳಿಂದ ವ್ಯವಸ್ಥಾಪಕ ನಿರ್ದೇಶಕರವರೆಗೆ ವಿವಿಧ ಹಂತಗಳ ಸಿಬ್ಬಂದಿ ಇಲಾಖೆಯಲ್ಲಿದ್ದಾರೆ. ಎಲ್ಲ ಹಂತಗಳಲ್ಲಿಯೂ ಸುಧಾರಣೆ ತರುವ ಮೂಲಕ ಇಲಾಖೆಯನ್ನು ಕ್ರಿಯಾಶೀಲಗೊಳಿಸುವ ಬಗ್ಗೆ ಆಲೋಚನೆ ನಡೆಸಿದ್ದೇನೆ. ಈ ವಿಚಾರವಾಗಿ ಅಧಿಕಾರಿಗಳ ಜತೆ ಎರಡು ಸುತ್ತಿನ ಸಬೆ ನಡೆಸಿದ್ದೇನೆ.

ಸೌರ ವಿದ್ಯುತ್ ಯೋಜನೆಗಳಲ್ಲಿ ಈ ಹಿಂದಿನ ಹಗರಣ ತನಿಖೆ ನಡೆಸಬೇಕೆಂಬ ಈ ಹಿಂದೆ ನಾನು ಮಾಡಿದ್ದ ಒತ್ತಾಯಕ್ಕೆ ಈಗಲೂ ಬದ್ಧನಾಗಿದ್ದೇನೆ. ಇಲಾಖೆಯಲ್ಲಿ ಮುಂಚೆ ಆಗಿರುವ ತಪ್ಪುಗಳನ್ನು ಸರಿಪಡಿಸಿ, ಸುಧಾರಣೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆಯುತ್ತೇನೆ. ಲೋಪದೋಷಗಳೇನಾದರು ಆಗಿದ್ದರೆ ತನಿಖೆಗೆ ಸಿದ್ಧನಿದ್ದೇನೆ ಎಂದರು.

- Advertisement -
spot_img

Latest News

error: Content is protected !!