Wednesday, May 8, 2024
Homeಕರಾವಳಿಮಂಗಳೂರು: ಮಳಲಿ ದರ್ಗಾವಿರುವ ಸ್ಥಳದಲ್ಲಿ ಹಿಂದೂ ದೇವರಿರುವುದು ನಿಜ: ತಾಂಬೂಲ ಪ್ರಶ್ನೆಯಲ್ಲಿ ದೈವಜ್ಞ ಗೋಪಾಲಕೃಷ್ಣ ಪಣಿಕರ್...

ಮಂಗಳೂರು: ಮಳಲಿ ದರ್ಗಾವಿರುವ ಸ್ಥಳದಲ್ಲಿ ಹಿಂದೂ ದೇವರಿರುವುದು ನಿಜ: ತಾಂಬೂಲ ಪ್ರಶ್ನೆಯಲ್ಲಿ ದೈವಜ್ಞ ಗೋಪಾಲಕೃಷ್ಣ ಪಣಿಕರ್ ಮಾಹಿತಿ

spot_img
- Advertisement -
- Advertisement -

ಮಂಗಳೂರು : ಮಳಲಿ ದರ್ಗಾ ವಿವಾದದ ಹಿನ್ನೆಲೆಯಲ್ಲಿ ಇಂದು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ಇಟ್ಟಿದ್ದು, ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದು ತಾಂಬೂಲ ಪ್ರಶ್ನೆಯ ವೇಳೆ ದೈವಜ್ಞ ಗೋಪಾಲಕೃಷ್ಣ ತಿಳಿಸಿದ್ದಾರೆ.

ಕೇರಳದ ಪ್ರಖ್ಯಾತ ಜ್ಯೋತಿಷಿ ಜೆ.ಪಿ. ಗೋಪಾಲಕೃಷ್ಣ ಪಣಿಕರ್ ಅವರು ಮಸೀದಿ ಸ್ಥಳದಲ್ಲಿ ತಾಂಬೂಲ ಪ್ರಶ್ನೆ ಮೂಲಕ ದೇವರು ಇರುವುದು ನಿಜ ಎಂದು ಹೇಳಿದ್ದಾರೆ.

ಮಂಗಳೂರಿನ ಮಳಲಿಯ ಜುಮಾ ಮಸೀದಿಯಲ್ಲಿ ದೇವರು ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಮಸೀದಿಯ ಕೆಳಗೆ ಹಿಂದೂ ದೇವಾಲಯದಂತಹ ವಾಸ್ತುಶಿಲ್ಪದ ವಿನ್ಯಾಸಗಳು ಕಂಡುಬಂದಿದ್ದು, ಇದು ವಿವಾದಕ್ಕೆ ಕಾರಣವಾಗಿದ್ದರಿಂದ ತಾಂಬೂಲ ಪ್ರಶ್ನೆ ಕೇಳಲಾಗಿತ್ತು.

ಇನ್ನು ಪೊಲೀಸ್ ಇಲಾಖೆ 24-05-2022 ರ ಸಂಜೆ 08:00 ಗಂಟೆಯಿಂದ ರಿಂದ ದಿನಾಂಕ: 26-05-2022 ರ ಬೆಳಿಗ್ಗೆ 08:00 ಗಂಟೆಯವರೆಗೆ ಮಂಗಳೂರು ನಗರದ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿ ಪೇಟೆಯ ಜುಮ್ಮಾ ಮಸೀದಿಯ ಸುತ್ತಮುತ್ತಲಿನ 500 ಮೀಟರ್ (ಕಾಚಿಲಕೋಡಿಯಿಂದ ಮಳಲಿ ಕಡಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡುತಮ ರಸ್ತೆ) ರವರೆಗೆ ವ್ಯಾಪ್ತಿಯನ್ನು ಸಂಪೂರ್ಣ ನಿಷೇಧಿತ ಪ್ರದೇಶವೆಂದು ಘೋಷಿಸಿ, ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ.

- Advertisement -
spot_img

Latest News

error: Content is protected !!