- Advertisement -
- Advertisement -
ಕಾರವಾರ: ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗುವಾಗ ಅಪಘಾತವಾಗಿ ಕಳ್ಳರು ಸಿಕ್ಕಿ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಎಕ್ಕೆಗೋಳಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಇರ್ಫಾನ್ ಹಾಗೂ ಆರೀಫ್ ಎಂಬ ಕಳ್ಳರು, ದೇವಸ್ಥಾನದ ಬೀಗ ಮುರಿದು 55 ಸಾವಿರ ರೂ. ಹಣ ಮತ್ತು ದೇವರ ಪರಿಕರಗಳನ್ನು ಕದ್ದಿದ್ದರು. ಈ ವೇಳೆ ಗೊತ್ತಾಗಿ ಜನರು ಓಡಿಸಿಕೊಂಡು ಬಂದಾಗ ತಪ್ಪಿಸಿಕೊಂಡು ಹೋಗಿದ್ದ ಕಳ್ಳರ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಭಟ್ಕಳ ಪೊಲೀಸರಿಗೆ ಮಾಲು ಸಮೇತ ಸ್ಥಳೀಯರು ವಶಕ್ಕೆ ನೀಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ದೇವಸ್ಥಾನದಲ್ಲೇ ಕಳ್ಳತನ ಮಾಡಿದ್ರೆ ತಕ್ಕ ಶಾಸ್ತಿಯಾಗದೇ ಇರುತ್ತಾ ಅನ್ನೋದಕ್ಕೆ ಇದು ಒಂದು ಉದಾಹರಣೆ ಅನ್ನುತ್ತಿದ್ದಾರೆ ಸ್ತಳೀಯರು.
- Advertisement -