Sunday, June 7, 2026
Homeಕರಾವಳಿಕಾರ್ಕಳ: ಹೆಬ್ರಿಯಲ್ಲಿ ದೇವಸ್ಥಾನಕ್ಕೆ ನುಗ್ಗಿ‌ ಕಳ್ಳತನ

ಕಾರ್ಕಳ: ಹೆಬ್ರಿಯಲ್ಲಿ ದೇವಸ್ಥಾನಕ್ಕೆ ನುಗ್ಗಿ‌ ಕಳ್ಳತನ

- Advertisement -
- Advertisement -

ಕಾರ್ಕಳ: ದೇವಸ್ಥಾನಕ್ಕೆ ನುಗ್ಗಿ ಕಳ್ಳರು ಕಳ್ಳತನ ಮಾಡಿರುವ ಘಟನೆ ಹೆಬ್ರಿಯ ಶಿವಪುರದ ಗ್ರಾಮದ ಬ್ಯಾಣ ಎಂಬಲ್ಲಿರುವ ಗದ್ದಿಗೆ ಅಮ್ಮನವರ ದೇವಸ್ಥಾನದಲ್ಲಿ ನಡೆದಿದೆ.  ನಿನ್ನೆ ರಾತ್ರಿ ವೇಳೆ ನುಗ್ಗಿದ ದುಷ್ಕರ್ಮಿಗಳು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ‌.

ದೇವಸ್ಥಾನದ ಎದುರಿನ ಬಾಗಿಲಿಗೆ ಹಾಕಿರುವ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು, ದೇವಿಯ ಮೂರ್ತಿಗೆ ಹಾಕಿರುವ ಸುಮಾರು ಒಂದೂವರೆ ಪವನಿನ ಚಿನ್ನದ ಕರಿಮಣಿ ಮತ್ತು ಸುಮಾರು ಒಂದೂವರೆ ಪವನ್‌ನ 3 ಚಿನ್ನದ ಸಣ್ಣ ಸರ ಹಾಗೂ ಸಣ್ಣ ಚಿನ್ನದ ತಾಳಿ ಇರುವ ಬೆಳ್ಳಿಯ ಸರ ಹಾಗೂ ಎರಡು ಕಾಣಿಗೆ ಡಬ್ಬಿಗಳನ್ನು ಕದ್ದಿದ್ದಾರೆ.

ಇವುಗಳ ಒಟ್ಟು ಮೌಲ್ಯ 60 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!