Friday, June 5, 2026
Homeಕರಾವಳಿಬಂಟ್ವಾಳದಲ್ಲಿ ಅಂಗಡಿ ಮಾಲೀಕರ ನಿದ್ದೆಗೆಡಿಸಿದ ಕಳ್ಳರು

ಬಂಟ್ವಾಳದಲ್ಲಿ ಅಂಗಡಿ ಮಾಲೀಕರ ನಿದ್ದೆಗೆಡಿಸಿದ ಕಳ್ಳರು

- Advertisement -
- Advertisement -

ಬಂಟ್ವಾಳ: ಮಾಣಿಯ ಅಂಗಡಿ ಮಾಲೀಕರು ಕಳ್ಳರ ಕಾಟಕ್ಕೆ ಬೇಸತ್ತು ಹೋಗಿದ್ದಾರೆ,ಶಿವಾರ ರಾತ್ರಿ ಇಲ್ಲಿನ ತರಕಾರಿ ಅಂಗಡಿಗಳು ಹಾಗೂ ಬೇಕರಿಯೊಂದಕ್ಕೆ ನುಗ್ಗಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಇದರ ಬೆನ್ನಲ್ಲೇ ನಿನ್ನೆ ಮತ್ತೆ ಮಾಣಿಯ ಪೆಟ್ರೋಲ್ ಬಂಕ್ ಬಳಿಯ ಟೈಯರ್ ಅಂಗಡಿ ಹಾಗೂ ಹಳೀರ ಬಳಿಯಲ್ಲಿದ್ದ ಮತ್ತೊಂದು ಟೈಯರ್ ಅಂಗಡಿಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಬೆಲೆಬಾಳುವ ಟೈಯರ್ ಗಳನ್ನು ಕದ್ದೊಯ್ದಿದ್ದಾರೆ.

ಕಳ್ಳರ ಕಾಟದಿಂದ ಬೇಸತ್ತಿರುವ ಅಂಗಡಿ ಮಾಲೀಕರು ಹೀಗಾದ್ರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!