Friday, June 5, 2026
Homeಕರಾವಳಿಮಂಗಳೂರು; ಪಾರ್ಸೆಲ್ ಡೆಲಿವರಿ ಅಂಗಡಿಗೆ ಕನ್ನ ಹಾಕಿದ ಖದೀಮರು: ಲಕ್ಷಾಂತರ ರೂಪಾಯಿ ನಗದು, ವಸ್ತುಗಳು ಕಳವು

ಮಂಗಳೂರು; ಪಾರ್ಸೆಲ್ ಡೆಲಿವರಿ ಅಂಗಡಿಗೆ ಕನ್ನ ಹಾಕಿದ ಖದೀಮರು: ಲಕ್ಷಾಂತರ ರೂಪಾಯಿ ನಗದು, ವಸ್ತುಗಳು ಕಳವು

- Advertisement -
- Advertisement -

ಮಂಗಳೂರು: ಪಾರ್ಸೆಲ್ ಡೆಲಿವರಿ ಅಂಗಡಿಯೊಂದಕ್ಕೆ ಕನ್ನ ಹಾಕಿದ ಖದೀಮರು ಡೆಲಿವರಿಗಾಗಿ ಇರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ  ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮುಕ್ಕ ಚೆಕ್ ಪೋಸ್ಟ್ ಬಳಿ ನಡೆದಿದೆ.


ಅಂಗಡಿಯ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಡ್ರಾವರ್ ಜಾಲಾಡಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ನಗದು ಹಾಗೂ ಗ್ರಾಹಕರಿಗೆ ಡೆಲಿವರಿ ಮಾಡಲು ಇಟ್ಟಿದ್ದ ಬೆಲೆಬಾಳುವ ಪಾರ್ಸೆಲ್ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.  ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!