Thursday, June 4, 2026
Homeಅಪರಾಧಬೆಳ್ತಂಗಡಿಯ ಜ್ಯೂಸ್ ಜಂಕ್ಷನ್ ನಿಂದ ಹಣ ಕಳ್ಳತನ

ಬೆಳ್ತಂಗಡಿಯ ಜ್ಯೂಸ್ ಜಂಕ್ಷನ್ ನಿಂದ ಹಣ ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ತಾಲೂಕಿನ ಹಲವೆಡೆ ಅನೇಕ ದಿನಗಳಿಂದ ಕಳ್ಳರು ಕರಾಮತ್ತು ತೋರಿಸುತ್ತಿದ್ದು ಇಂದು ಕೂಡ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ‌.

ಬೆಳ್ತಂಗಡಿ ನಗರ ಪಂಚಾಯತ್ ಕಟ್ಟಡದಲ್ಲಿರುವ ದಿನೇಶ್ ಶೆಟ್ಟಿ ಎಂಬವರ ಜ್ಯೂಸ್ ಜಂಕ್ಷನ್ ಎಂಬ ಅಂಗಡಿಗೆ ಶುಕ್ರವಾರ ತಡ ರಾತ್ರಿ ಕಳ್ಳರು ಶಟರ್ ಮುರಿದು ಒಳನುಗ್ಗಿ ಕ್ಯಾಶ್ ಡ್ರಾವರ್ ನಲ್ಲಿದ್ದ ಐವತ್ತು ಸಾವಿರ ರೂಪಾಯಿಯನ್ನು ಕಳ್ಳತನ ಮಾಡಿದ್ದಾರೆ.

ದಿನೇಶ್ ಶೆಟ್ಟಿ ನಗರ ಪಂಚಾಯತ್ ಗೆ ಬಾಡಿಗೆ ಕಟ್ಟಲು ಶುಕ್ರವಾರ ಒಟ್ಟು ಮಾಡಿ ಅಂಗಡಿಯಲ್ಲಿ ಇಟ್ಟಿದ್ದರು. ಇಂದು ಬೆಳಗ್ಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಗೆ ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!