Sunday, June 7, 2026
Homeಅಪರಾಧಬಂಟ್ವಾಳ: ಹಾಡುಹಗಲೇ ಅಂಗಡಿಯ ಕ್ಯಾಶ್ ಡ್ರಾಯರ್ ನಿಂದ ನಗದು ಕಳವು : ಸಿ.ಸಿ.ಕ್ಯಾಮರಾದಲ್ಲಿ...

ಬಂಟ್ವಾಳ: ಹಾಡುಹಗಲೇ ಅಂಗಡಿಯ ಕ್ಯಾಶ್ ಡ್ರಾಯರ್ ನಿಂದ ನಗದು ಕಳವು : ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ಕಳ್ಳತನದ ದೃಶ್ಯ

- Advertisement -
- Advertisement -

ಬಂಟ್ವಾಳ: ಬಿಸಿರೋಡಿನ ಹೃದಯ ಭಾಗದ ಅಂಗಡಿಯೊಂದರಿಂದ ಹಾಡುಹಗಲೇ ಕ್ಯಾಶ್ ಡ್ರಾಯರ್ ಗೆ ಕೈ ಹಾಕಿ ಹಣ ಕಳ್ಳತನ ಮಾಡಿರುವ ದೃಶ್ಯ ವೊಂದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಂಟ್ವಾಳ ತಾಲೂಕು ‌ಆಡಳಿತ ಕೇಂದ್ರ (ಮಿನಿ ವಿಧಾನ ಸೌಧದ ಕಚೇರಿ) ಮುಂಭಾಗದಲ್ಲಿರುವ ಎಸ್.ಆರ್.ಟಯರ್ ಮಾಲಕ ಸಂದೀಪ್ ಅವರ ಅಂಗಡಿಯಿಂದ ಕಳ್ಳನೊರ್ವ ಹಣ ಎಗರಿಸುವ ದೃಶ್ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ.

ಅಕ್ಟೋಬರ್ 11 ರಂದು ಸುಮಾರು 12 ಗಂಟೆ ವೇಳೆಗೆ ಮಾಲಕ ಸಂದೀಪ್ ಅವರು ಅಂಗಡಿ ಮುಂಭಾಗದಲ್ಲಿ ಕಾರೊಂದು ಅಡ್ಡ ನಿಲ್ಲಿಸಲು ಬಂದ ವೇಳೆ ಆತನನ್ನು ಬದಿಗೆ ನಿಲ್ಲಿಸುವಂತೆ ತಿಳಿಸಿ ಅಂಗಡಿಯಿಂದ ತೆರಳಿದ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡ ಕಳ್ಳ ಕೂಡಲೇ ಅಂಗಡಿ ಒಳಗೆ ನುಗ್ಗಿ, ಕ್ಯಾಶ್ ಡ್ರಾಯರ್ ಓಪನ್ ಮಾಡಿ ಅದರಲ್ಲಿದ್ದ ಸುಮಾರು 10 ಸಾವಿರ ನಗದು ಹಣವನ್ನು ದೋಚಿಕೊಂಡು ಹೋಗುತ್ತಿರುವ ದೃಶ್ಯ ಸೆರೆ ಸಿಕ್ಕಿದೆ.ಸಂದೀಪ್ ಅವರು ಹೊರಗೆ ಅಡ್ಡ ಇಟ್ಟಿದ್ದ ಕಾರನ್ನು ತೆರವುಮಾಡಲು ತಿಳಿಸಿ ವಾಪಾಸು ಬಂದು ಕ್ಯಾಸ್ ಡ್ರಾಯರ್ ಓಪನ್ ಆಗಿದ್ದು‌, ಸಂಶಯಗೊಂಡು ನೋಡಿದಾಗ ನಗದು ಹಣ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಸಿ.ಸಿ.ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಳವಾದ ಬಗ್ಗೆ ತಿಳಿದುಬಂದಿದೆ..

- Advertisement -

Latest News

error: Content is protected !!