- Advertisement -


- Advertisement -
ಬೆಳ್ತಂಗಡಿ : ಉಜಿರೆ ಅನುಗ್ರಹ ಪಿ ಯು ಕಾಲೇಜಿನಲ್ಲಿ ಮಾರ್ಚ್ 3ರಂದು ತಡರಾತ್ರಿ ಕಳ್ಳತನ ನಡೆದ ಘಟನೆ ನಡೆದಿದೆ.ಕಾಲೇಜಿನ ಕಚೇರಿಗೆ ನುಗ್ಗಿದ ಕಳ್ಳರು, ಹಣಕ್ಕಾಗಿ ಹುಡುಕಾಟ ನಡೆಸಿದ್ದು ಹಣ ಸಿಗದ ಹಿನ್ನೆಲೆ, ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ , ಕೊನೆಗೆ ಸಿಸಿ ಕ್ಯಾಮೆರಾದ ಎನ್ ವಿಆರ್, ಹಾರ್ಡ್ ಡಿಸ್ಕ್ ಕದ್ದೊಯ್ದಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ್ ಹಾಗೂ ತಂಡ, ಮಂಗಳೂರಿನಿಂದ ಶ್ವಾನದಳ, ಮಂಗಳೂರು ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


