- Advertisement -
- Advertisement -
ಉಡುಪಿ; ಮನೆಯವರು ಯಕ್ಷಗಾನಕ್ಕೆ ತೆರಳಿದ್ದಾಗ ಮನೆಗೆ ನುಗ್ಗಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ. ಯತಿರಾಜ್ ಉಪ್ಪುಂದ, ಮಹೇಶ್ ಯಳಜಿತ್, ಕಾರ್ತಿಕ್ ನಾಗೂರು ಬಂಧಿತರು.
ಆರೋಪಿಗಳು ಉಪ್ಪುಂದ ಗ್ರಾಮದ ಬಪ್ಪೆಹಕ್ಕು ನಿವಾಸಿ ಜನಾರ್ದನ ಅವರ ಮನೆಯಿಂದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದರು. ಆರೋಪಿಗಳಿಂದ ಕಳ್ಳತನ ಮಾಡಿದ ಚಿನ್ನಾಭರಣ, ಲ್ಯಾಪ್‌ಟಾಪ್, ಕೃತ್ಯಕ್ಕೆ ಬಳಸಿದ ಮೊಬೈಲ್ ಸೇರಿ ₹3 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮನೆ ಮಾಲೀಕ ಜನಾರ್ದನ ಅವರು ಮಾರ್ಚ್ 10ರಂದು ರಾತ್ರಿ ಮನೆಗೆ ಬೀಗ ಹಾಕಿ ಸಮೀಪದ ಯಕ್ಷಗಾನಕ್ಕೆ ಮನೆಯವರೊಂದಿಗೆ ತೆರಳಿದ್ದರು. ರಾತ್ರಿ 1 ಗಂಟೆಗೆ ವಾಪಾಸ್ ಬಂದಾಗ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಕೋಣೆಯಲ್ಲಿ ಕಪಾಟಿನಲ್ಲಿರಿಸಿದ್ದ ಸ್ವತ್ತುಗಳನ್ನು ಕಳವು ಮಾಡಿದ್ದು ಗಮನಕ್ಕೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಬೈಂದೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement -