Thursday, June 4, 2026
Homeಕರಾವಳಿಮಂಗಳೂರುಪುತ್ತೂರು; ಸಾಲಬಾಧೆಯಿಂದ ಹೋಟೆಲ್ ಮಾಲೀಕ ನೇಣಿಗೆ ಶರಣು

ಪುತ್ತೂರು; ಸಾಲಬಾಧೆಯಿಂದ ಹೋಟೆಲ್ ಮಾಲೀಕ ನೇಣಿಗೆ ಶರಣು

- Advertisement -
- Advertisement -

ಪುತ್ತೂರು; ಸಾಲಬಾಧೆಯಿಂದ ಹೋಟೆಲ್ ಮಾಲೀಕ ನೇಣಿಗೆ ಶರಣಾಗಿರುವ ಘಟನೆ ಕಲ್ಲರ್ಪೆಯಲ್ಲಿ ನಡೆದಿದೆ. ಚಿನ್ನು ಹೋಟೆಲ್ ಮಾಲೀಕ ಮೋಹನ್ ಆತ್ಮಹತ್ಯೆಗೆ ಶರಣಾದವರು. ಅವರು ತಮ್ಮ  ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. 


ಮೋಹನ್ ಅವರು ಎರಡು ವಾರಗಳಿಂದ ಹೋಟೆಲ್ ಬಂದ್ ಮಾಡಿದ್ದರು. ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ನೆರೆಯ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳಿದ್ದ ಮನೆಯವರು ಸಂಜೆ ವಾಪಸಾದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಮೋಹನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ‘ಸಾಲಬಾಧೆಯೇ ನನ್ನ ಸಾವಿಗೆ ಕಾರಣ’ ಎಂದು ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ. ಪತ್ನಿ ನೀಡಿದ ದೂರಿನಂತೆ ಸಂಪ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರಿಗೆ ತಾಯಿ, ಪತ್ನಿ, 4 ವರ್ಷದ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!