- Advertisement -
- Advertisement -
ಸುಳ್ಯ; ಚಿನ್ನಾಭರಣ ಕಳ್ಳತನದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಕಾಸರಗೋಡು ನಿವಾಸಿಯಾದ ಆಸೀಮ್@ ಆಸೀಮ್ ಖುನಿಯ, ಬಿನ್ ಹಸನ್ ತಂಗಳ್ (43) ಬಂಧಿತ ಆರೋಪಿ.ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. .
ಆರೋಪಿಯಿಂದ ಅಂದಾಜು ರೂ 15,13,391/- ಮೌಲ್ಯದ ಚಿನ್ನಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು, ಆರೋಪಿಯನ್ನು ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿತಂಡ ಜಾಲ್ಸೂರಿನ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
- Advertisement -