Thursday, May 2, 2024
Homeಅಪರಾಧಯುವತಿಯ ಕರೆಗೆ ಸ್ಪಂದಿಸಿ ಆಕೆಯ ರೂಮಿಗೆ ಹೋಗಿದ್ದ ಯೂಟ್ಯೂಬರ್‌; ಹೀಗೊಂದು ಹನಿಟ್ರಾಪ್ ಪ್ರಕರಣ..!

ಯುವತಿಯ ಕರೆಗೆ ಸ್ಪಂದಿಸಿ ಆಕೆಯ ರೂಮಿಗೆ ಹೋಗಿದ್ದ ಯೂಟ್ಯೂಬರ್‌; ಹೀಗೊಂದು ಹನಿಟ್ರಾಪ್ ಪ್ರಕರಣ..!

spot_img
- Advertisement -
- Advertisement -

ಕೇರಳ: ಕೌಟುಂಬಿಕ ಸಲಹೆಗಾರರಾಗಿರುವ ಓರ್ವ ಯೂಟ್ಯೂಬರ್‌ನನ್ನು ಹನಿಟ್ರಾಪ್ ಬಲೆಗೆ ಕೆಡವಿ ಹಣ ಮತ್ತು ಕಾರು ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯರಿಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಇಡುಕ್ಕಿಯ ವತ್ತಪರಾ ಮೂಲದ ಪಿ.ಎಸ್. ಅಭಿಲಾಷ್ (28), ಕೊಲ್ಲಂನ ಕೈತೋಡ್ ನೀಲಮೇಲ್ ನಿವಾಸಿ ಎ.ಐ.ಅಮೀನ್ (23), ಇಡುಕ್ಕಿಯ ಸಾಂತಂಪರಾ ಮೂಲದ ಪಿ. ಅಥಿರಾ (28) ಹಾಗೂ ಇಡುಕ್ಕಿಯ ವಲರಾ ಮೂಲದ ಕೆ.ಕೆ. ಅಕ್ಷಯಾ (21). ಈ ನಾಲ್ವರು ಆರೋಪಿಗಳನ್ನು ಥಿಪ್ಪನಿಥುರಾದಲ್ಲಿರುವ ಅಪಾರ್ಮೆಂಟ್‌ನಲ್ಲಿ ಕೂಥಟ್ಟುಕುಲಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಚೇರಿಯ ಯೂಟ್ಯೂಬ‌ರ್ ಓರ್ವರು ವಂಚನೆಗೆ ಒಳಗಾದವರು. ತನಗೆ ಕೌನ್ಸೆಲಿಂಗ್‌ ಬೇಕಿದೆ ಎಂದು ಆರೋಪಿಗಳಲ್ಲಿ ಒಬ್ಬಾಕೆಯಾದ ಅಕ್ಷಯಾ, ಬುಧವಾರ ಮಧ್ಯಾಹ್ನ 2 ಗಂಟೆಗೆ ಮಧ್ಯವಯಸ್ಕ ಯೂಟ್ಯೂಬರ್‌ನನ್ನು ಕೂಥಟ್ಟು ಕುಲಂನಲ್ಲಿರುವ ಬಾಡಿಗೆ ರೂಮಿಗೆ ಕರೆದಿದ್ದಳು. ರೂಮಿಗೆ ತೆರಳಿದ ಬಳಿಕ ಅಕ್ಷಯಾ ಕೊಟ್ಟ ಜ್ಯೂಸ್ ಕುಡಿದ ಯೂಟ್ಯೂಬರ್ ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ.

ಯುಟ್ಯೂಬರ್ ಎಚ್ಚರಗೊಳ್ಳುವಷ್ಟರಲ್ಲಿ ವಂಚನೆ ಗ್ಯಾಂಗ್‌ನ ನಾಲ್ವರು ಸೇರಿ ಆಥಿರಾ ಜತೆ ಬೆತ್ತಲೆಯಾಗಿ ನಿಲ್ಲುವಂತೆ ಮಾಡಿ ಫೋಟೋ, ವಿಡಿಯೋ ತೆಗೆದಿದ್ದಾರೆ. ಇನ್ನು ಇದಾದ ಬಳಿಕ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಹರಿಬಿಡುವುದಾಗಿ ಯೂಟ್ಯೂಬರ್‌ಗೆ ಗ್ಯಾಂಗ್ ಬೆದರಿಕೆ ಹಾಕಿದೆ. ಇದರಿಂದ ಆಘಾತಗೊಂಡ ಯೂಟ್ಯೂಬ‌ರ್ ಗ್ಯಾಂಗ್‌ನ ಬೇಡಿಕೆಯಂತೆ ತನ್ನ ಖಾತೆಯಲ್ಲಿದ್ದ 14000 ರೂಪಾಯಿಯನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಾರೆ. ಅಲ್ಲದೆ, ಎರಡು ಲಕ್ಷ ರೂ. ಮೌಲ್ಯದ ಕಾರನ್ನು ಸಹ ಆರೋಪಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ವಿರುದ್ಧ ಕೂಥಟ್ಟುಕುಲಂ ಠಾಣಾ ಪೊಲೀಸರು ತನಿಖೆ ನಡೆಸಿದ್ದು, ಯೂಟ್ಯೂಬರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ನಿವಾಸವನ್ನು ಮೊಬೈಲ್ ಟವರ್ ಲೊಕೇಶನ್ ಮತ್ತು ವಾಹನದ ಜಿಪಿಎಸ್ ಲೊಕೇಶನ್ ಮೂಲಕ ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಈ ತಂಡ ಈ ಮೊದಲು ಯಾವುದೇ ರೀತಿಯ ವಂಚನೆ ಮಾಡಿದ್ದರೆ ಪರಿಶೀಲಿಸಲಾಗುವುದು ಎಂದು ಡಿವೈಎಸ್ಪಿ ಟಿ.ಬಿ.ವಿಜಯನ್ ಹಾಗೂ ಇನ್ಸ್ ಸ್ಪೆಕ್ಟರ್ ಎಂ.ಎ.ಆನಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!