Friday, June 5, 2026
Homeತಾಜಾ ಸುದ್ದಿನವಿಲು ವಿರುದ್ಧ ದೂರು ನೀಡಿದ ಮಹಿಳೆ

ನವಿಲು ವಿರುದ್ಧ ದೂರು ನೀಡಿದ ಮಹಿಳೆ

- Advertisement -
- Advertisement -

ರಾಮನಗರ; ಮಹಿಳೆಯೊಬ್ಬರು ನವಿಲೊಂದರ ವಿರುದ್ಧ ದೂರು ದಾಖಲಿಸಿರುವ ಘಟನೆ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದುವಾರದಿಂದ ಗ್ರಾಮದ ಸುತ್ತಮುತ್ತ ನವಿಲುಗಳ ಕಾಟ ಜಾಸ್ತಿಯಾಗಿದ್ದು, ಗ್ರಾಮದ ಲಿಂಗಮ್ಮ ಎಂಬವರ ಮೇಲೆ ನವಿಲು ದಾಳಿ ಮಾಡಿ ಗಾಯಗೊಳಿಸಿದೆ.

ಮನೆ ಹಿಂಭಾಗದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ನವಿಲು, ಲಿಂಗಮ್ಮನ ಎಡಭಾಗ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದೆ. ನವಿಲು ಏಕಾಏಕಿ ದಾಳಿ ಮಾಡುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ದಾಳಿ ಮಾಡಿದ ನವಿಲನ್ನು ಕೂಡಲೇ ಸ್ಥಳಾಂತರ ಮಾಡಬೇಕು. ಈ ನವಿಲಿನಿಂದ ನಮಗೆ ಬಹಳ ತೊಂದರೆ ಇದೆ ಅಂತ ದೂರು ನೀಡಿದ್ದಾರೆ.

ರಾಷ್ಟ್ರೀಯ ಪಕ್ಷಿ ನವಿಲು ಆದ್ದರಿಂದ ನವಿಲಿಗೆ ಏನಾದರೂ ತೊಂದರೆ ಮಾಡಿದರೆ ಅರಣ್ಯ ಇಲಾಖೆ ಮನುಷ್ಯರಿಗೆ ದಂಡ ಹಾಕುತ್ತೆ. ಅದೇ ನವಿಲು ಮನುಷ್ಯರ ಮೇಲೆ ಈಗ ಅಟ್ಯಾಕ್ ಮಾಡಿದೆ ಅದಕ್ಕೆ ಏನ್ ಮಾಡುತ್ತಾರೆ ಅಂತ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮಹಿಳೆ ಕುಟುಂಬಸ್ಥರು ಪ್ರಶ್ನೆ ಮಾಡಿದ್ದಾರೆ.‌ ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಲಯ ಅರಣ್ಯಾಧಿಕಾರಿ ಕಿರಣ್​ ಅವರು ನವಿಲಿನ ದಾಳಿಯ ಕಾರಣ ಆಗಿರುವ ನಷ್ಟವನ್ನು ಅಂದರೆ ಆಸ್ಪತ್ರೆಯ ಬಿಲ್​ನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ.

- Advertisement -

Latest News

error: Content is protected !!