Sunday, June 7, 2026
Homeತಾಜಾ ಸುದ್ದಿಪತಿ ಚಾಕೊಲೇಟ್‌ ತಂದು ಕೊಡಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಪತ್ನಿ

ಪತಿ ಚಾಕೊಲೇಟ್‌ ತಂದು ಕೊಡಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಪತ್ನಿ

- Advertisement -
- Advertisement -

ಬೆಂಗಳೂರು : ಪತಿ ಚಾಕೊಲೇಟ್‌ ತಂದು ಕೊಡಲಿಲ್ಲ ಎಂದು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಬೆಂಗಳೂರಿನ ಹೆಣ್ಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ನಂದಿನಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ . ಈಕೆ 6 ವರ್ಷ ಹಿಂದೆ ಗೌತಮ್‌ ಎಂಬಾತನನ್ನು ಮದುವೆಯಾಗಿದ್ದಳು.

ನಂದಿನಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಗೌತಮ್‌ ಸಲೂನ್‌ನಲ್ಲಿ ಕೆಲಸ ಮಾಡಿಕೊಂಡಿದ್ದನು.ನಿನ್ನೆ ಪತಿ ಕೆಲಸಕ್ಕೆ ಹೋಗುವಾದ ಚಾಕೊಲೇಟ್‌ ಕೇಳಿದ್ದ ನಂದಿನಿ ಮಧ್ಯಾಹ್ನವಾದ್ರೂ ಚಾಕೊಲೇಟ್‌ ತಂದು ಕೊಡದಿದ್ದಕ್ಕೆ ಸಿಟ್ಟುಕೊಂಡಿದ್ದು, ಬಳಿಕ ಗೌತಮ್‌, ಪತ್ನಿಯ ಫೋನ್‌ ಕರೆ ಸ್ವೀಕರಿಸದ ಹಿನ್ನೆಲೆ ನೇಣು ಬಿಗಿದು ಕೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡು ದುರಂತ ಘಟನೆ ನಡೆದಿದೆ ಪತಿ ಗೌತಮ್‌ ಸಂಜೆ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

- Advertisement -

Latest News

error: Content is protected !!