Monday, June 15, 2026
Homeಕರಾವಳಿಉಡುಪಿಉಡುಪಿ;ಡ್ಯಾಮ್ ನಲ್ಲಿ ಈಜಲು ತೆರಳಿದ ಬಾಲಕರಿಬ್ಬರು ನೀರುಪಾಲು

ಉಡುಪಿ;ಡ್ಯಾಮ್ ನಲ್ಲಿ ಈಜಲು ತೆರಳಿದ ಬಾಲಕರಿಬ್ಬರು ನೀರುಪಾಲು

- Advertisement -
- Advertisement -

ಉಡುಪಿ;ಡ್ಯಾಮ್ ನಲ್ಲಿ ಈಜಲು ತೆರಳಿದ ಬಾಲಕರಿಬ್ಬರು ನೀರುಪಾಲಾದ ಘಟನೆ ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದಲ್ಲಿ ನಡೆದಿದೆ. ಶ್ರೀಶ(13), ಜಯಂತ್(19) ಮೃತರು. ರಜೆ ಹಿನ್ನೆಲೆ ಗೆಳೆಯರ ಜೊತೆ ಈಜಲು ಹೋಗಿದ್ದಾಗ ಇಬ್ಬರು ನೀರುಪಾಲಾಗಿದ್ದಾರೆ.


ಬೆಳ್ವೆ ಸಮೀಪದ ಕಜ್ಕೆ ಸಂತೆಕಟ್ಟೆ ಸಂಪರ್ಕ ರಸ್ತೆಯ ಬಳಿ ಇರುವ ಕಿಂಡಿ ಅಣೆಕಟ್ಟುವಿನ ಮೇಲ್ಭಾಗದಲ್ಲಿ ಶ್ರೀಶ ಆಚಾರ್, ಜಯಂತ್ ನಾಯ್ಕ್ ಸೇರಿದಂತೆ ನಾಲ್ಕು ಮಕ್ಕಳು ಈಜಲು ತೆರಳಿದ್ದರು ದೆ. ಶ್ರೀಶ ನೀರಿನಲ್ಲಿ ಆಯ ತಪ್ಪುತ್ತಿದ್ದಂತೆ ರಕ್ಷಣೆಗೆ ಜಯಂತ್ ನೀರಿಗೆ ಧುಮುಕಿದ್ದು ಇಬ್ಬರು ನೀರು ಪಾಲಾಗಿದ್ದಾರೆ.

ಕೂಡಲೇ ಸ್ಥಳದಲ್ಲಿದ್ದ ಇತರ ಮಕ್ಕಳು ಕಿರುಚಾಡಿದ್ದು ಹೊಡೆದಿದ್ದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ನೀರಿನಲ್ಲಿ ಮುಳುಗಿದ್ದ ಮಕ್ಕಳ ಹುಡುಕಲು ಮುಂದಾದರು. ಕೆಲವೇ ಹೊತ್ತಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!