- Advertisement -
- Advertisement -
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲಿ ಒಂದಾದ ‘ವಜ್ರಮುಷ್ಟಿ ಕಾಳಗ’ ಈ ಬಾರಿ ಪೊಲೀಸರ ಅಡ್ಡಿಯಿಂದ ರದ್ದಾಗಿದೆ. ಮೈಸೂರು ಸಂಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಸಾಂಪ್ರದಾಯಿಕ ಕಾಳಗ ರದ್ದುಗೊಂಡಿದೆ ಎನ್ನಲಾಗಿದೆ.
ಪರಂಪರೆಯಂತೆ, ಅರಮನೆಯಿಂದ ಯದುವೀರ್ ಒಡೆಯರ್ ಅವರ ವಿಜಯಯಾತ್ರೆ ಆರಂಭವಾಗುವ ಮುನ್ನ ಅಂಬಾ ವಿಲಾಸ ಅರಮನೆ ಆವರಣದ ಕಲ್ಯಾಣ ತೊಟ್ಟಿಯಲ್ಲಿ ರೋಚಕ ವಜ್ರಮುಷ್ಟಿ ಕಾಳಗ ನಡೆಯಬೇಕಿತ್ತು. ಆದರೆ, ಸಮನ್ವಯದ ಕೊರತೆ ಹಾಗೂ ಪೊಲೀಸರಿಂದ ಸಮಯಕ್ಕೆ ಸರಿಯಾಗಿ ಅನುಮತಿ ಸಿಗದ ಕಾರಣ ಕಾಳಗ ಆಯೋಜನೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ನಡುವೆ, ರಾಜಮನೆತನದವರ ಮನವೊಲಿಸುವ ಪ್ರಯತ್ನವೂ ಫಲ ನೀಡಿಲ್ಲ ಎಂದು ತಿಳಿದುಬಂದಿದೆ. ಕಾಳಗಕ್ಕೆ ಸಕಾಲದಲ್ಲಿ ಅವಕಾಶ ಕಲ್ಪಿಸಿದ್ದರೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬಹುದಿತ್ತು ಎಂದು ಪೈಲ್ವಾನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -


