Thursday, October 22, 2026
Homeಕರಾವಳಿಮಂಗಳೂರುಬಂಟ್ವಾಳ ತಾಲೂಕು: ಪಂಜಿಕಲ್ಲು ಹಾಗೂ ಇಡ್ಕಿದುವಿನಲ್ಲಿ ಸಿಡಿಲು ಮತ್ತು ಮಳೆಗೆ ಮೂರು ಮನೆಗಳಿಗೆ ಹಾನಿ

ಬಂಟ್ವಾಳ ತಾಲೂಕು: ಪಂಜಿಕಲ್ಲು ಹಾಗೂ ಇಡ್ಕಿದುವಿನಲ್ಲಿ ಸಿಡಿಲು ಮತ್ತು ಮಳೆಗೆ ಮೂರು ಮನೆಗಳಿಗೆ ಹಾನಿ

- Advertisement -
- Advertisement -

ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಮತ್ತು ಇಡ್ಕಿದು ಗ್ರಾಮಗಳಲ್ಲಿ ಅಕ್ಟೋಬರ್ 19 ಹಾಗೂ 20ರಂದು ಸಂಭವಿಸಿದ ಪ್ರತ್ಯೇಕ ಸಿಡಿಲು ಹಾಗೂ ಮಳೆಯಾಘಾತದಿಂದ ಒಟ್ಟು ಮೂರು ವಾಸದ ಮನೆಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪಂಜಿಕಲ್ಲು ಪದವು ಎಂಬಲ್ಲಿ ಗೋಪಾಲ ಪೂಜಾರಿ ಅವರ ಮನೆಗೆ ಅಕ್ಟೋಬರ್ 19ರಂದು ಮುಂಜಾನೆ ಸುಮಾರು 3.30ರ ವೇಳೆಗೆ ಸಿಡಿಲು ಬಡಿದಿದ್ದು, ಮನೆಯ ವಿವಿಧ ಭಾಗಗಳಿಗೆ ತೀವ್ರ ಹಾನಿಯಾಗಿದೆ. ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದೆ. ಬುಧವಾರ ಮನೆಯವರು ವಾಪಸ್ ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಇದೇ ಗ್ರಾಮದ ಪಾಟ್ರಡಿ ಮನೆಯ ಅಚ್ಚುತ ಆಚಾರಿ ಅವರ ಮನೆಗೂ ಸಿಡಿಲು ಬಡಿದು ಭಾಗಶಃ ಹಾನಿ ಸಂಭವಿಸಿದೆ.

ಇದಲ್ಲದೆ, ವಿಟ್ಲ ಸಮೀಪದ ಇಡ್ಕಿದು ಗ್ರಾಮದ ಸೂರ್ಯ ಮನೆ ನಿವಾಸಿ ಸಾಬಕುಂಞಿ ಅವರ ವಾಸದ ಮನೆಗೆ ಅಕ್ಟೋಬರ್ 20ರಂದು ಸಂಜೆ ಸುರಿದ ಭಾರೀ ಮಳೆಯಿಂದಾಗಿ ಹಾನಿಯಾಗಿದೆ. ಮನೆಗಳಿಗೆ ಹಾನಿಯಾಗಿರುವ ಕುರಿತು ಸ್ಥಳೀಯ ಆಡಳಿತದಿಂದ ಪರಿಶೀಲನೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!